ಕಾರವಾರ: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ನರಳುತ್ತ ಬಿದ್ದಿದ್ದ ಯುವಕನನ್ನು ತಮ್ಮದೇ ಕಾರಿನಲ್ಲಿ ಉತ್ತರ ಕನ್ನಡ ಲೋಕಸಭೆ ಚುನಾವಣಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಡಾ.ಅಂಜಲಿ ನಿಂಬಾಳ್ಕರ್ ಯಲ್ಲಾಪುರ- ಶಿರಸಿ ನಡುವೆ ಪ್ರಯಣಿಸುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಯುವಕನನ್ನು ಗಮನಿಸಿದ್ದರು. ವಿನಾಯಕ್ ಶೆಟ್ಟರ್ ಎಂಬ ಯುವಕ ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡಿದ್ದರು.

ಹಳಿಯಾಳದಿಂದ ಶಿರಸಿಗೆ ಹೋಗುವಾಗ ಯುವಕನನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್, ಕಾರು ನಿಲ್ಲಿಸಿ ಗಾಯಗೊಂಡವನನ್ನು ಪರಿಶೀಲಿಸಿದರು. ಸ್ವತಃ ವೈದ್ಯೆಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಸೂಕ್ತ ಪ್ರಥಮ ಉಪಚಾರ ನೀಡಿ ತಕ್ಷಣ ಯುವಕನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲೂ ಚಿಕಿತ್ಸೆ ವೇಳೆ ಸಿಬ್ಬಂದಿಯೊಂದಿಗಿದ್ದು ನೆರವು ನೀಡಿದರು. ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ.