ಬೆಳಗಾವಿ : ಹುಬ್ಬಳ್ಳಿಯ ನಿವಾಸಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಬೆಳಗಾವಿ ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾ ವತಿಯಿಂದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ,ಜಿಲ್ಲಾ ಮಹಿಳಾ ಮೋರ್ಚಾದ ಆಧ್ಯಕ್ಷೆ ಡಾ.ನಯನಾ ಭಸ್ಮೆ ಮತ್ತು ಶಿಲ್ಪಾ ಕೇಕರೆ, ಉಜ್ವಲಾ ಬಡವನಾಚೆ, ಭಾಗ್ಯಶ್ರೀ ಕೋಕಿತ್ಕರ್, ರಾಜೇಶ್ವರಿ ಒಡೆಯರ, ಸುಜಾತಾ ಮಠದ, ನಾಗವೇಣಿ ಕುಲಕರ್ಣಿ, ಮಾದೇವಿ ಮಠದ, ಸುವರ್ಣಾ ಕಾಂತಿ, ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.