ಚಿಕ್ಕಮಗಳೂರು :
ಅಣ್ಣಾಮಲೈ ಮುಖ್ಯಮಂತ್ರಿ ಆಗುತ್ತಾರೆ.. ಮೋದಿಗೆ ಪಟ್ಟಾಭಿಷೇಕವಾಗುತ್ತದೆ.. ಹೀಗೆಂದು ಭವಿಷ್ಯ ನುಡಿದವರು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು. ಪತ್ರಕರ್ತರ ಜೊತೆ ಮಾತನಾಡಿ,
ಮುಂದೆ ತಮಿಳುನಾಡು ಮುಖ್ಯಮಂತ್ರಿ ಆಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸುತ್ತಾರೆ. ಅದನ್ನು ನಾನು ನೋಡುತ್ತೇನೆ. ನೀವು ನೋಡುತ್ತೀ.ರಿ ಇದನ್ನು ನಾನು ಭವಿಷ್ಯ ಅಂತ ಹೇಳುತ್ತಿಲ್ಲ. ಸಮ್ಯಜ್ಞಾನ ಎಂದು ಹೇಳೋಣ. ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಮುಗಿದಿದೆ. ಸದ್ಯದಲ್ಲೇ ಮೋದಿಯ ಪಟ್ಟಾಭಿಷೇಕವನ್ನು ಎಲ್ಲರೂ ನೋಡುತ್ತೇವೆ. ಅಣ್ಣಾಮಲೈ ಎಸ್ ಪಿ ಆಗಿದ್ದಾಗ ಬಂದಿದ್ದರು. ಎರಡು ಸೇಬು ಕೊಟ್ಟು ಖಾಕಿಯಿಂದ ಖಾದಿ ಉಡುತ್ತಾರೆ ಎಂದು ಆಗಲೇ ಹೇಳಿದ್ದೆ ಎಂದು ವಿನಯ್ ಗುರೂಜಿ ಹೇಳಿದರು.

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಅನಿವಾರ್ಯ ಎಂಬ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ವಿನಯ್ ಗುರೂಜಿ, ಜಿನ್ನಾ ಈ ತಪ್ಪು ಮಾಡಿದ್ದರು. ಗಾಂಧೀಜಿ ಅದನ್ನು ಬರೆದಿಡುತ್ತಾರೆ.ನೆಹರು- ಜಿನ್ನಾ ಇಬ್ಬರನ್ನು ಕೂರಿಸಿ ಗಾಂಧಿ ಮಾತನಾಡುತ್ತಾರೆ. ನಾನಿರುವರೆಗೆ ನನ್ನನ್ನು ಭಾಗ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ ಅವತ್ತು ಗಾಂಧಿ ಮಾತನ್ನು ಯಾರು ಕೇಳಲಿಲ್ಲ. ಇಂದಿನ ಹಿಂದೂ-ಮುಸ್ಲಿಂ ಗಲಾಟೆ ಹಳ್ಳಿ ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೇ ಎಂದು ಅಂದೆ ಹೇಳಿದ್ದರು. ಇಂದು ದೇಶದಲ್ಲಿ ಆಗುತ್ತಿರುವುದು ಅದೇ. ನಮ್ಮ ಅಧಿಕಾರದ ಆಸೆಗೆ ಜಾತಿ ಧರ್ಮವನ್ನು ಬದಿಗಿಡಬೇಕು. ನಿಮ್ಮ ರಾಜಕೀಯವನ್ನು ಕೆಲಸ, ಟ್ಯಾಲೆಂಟ್ ನಲ್ಲಿ ತೋರಿಸಿ. ಅವರಿವರನ್ನು ಬೈದುಕೊಂಡು ವಿಧಾನಸಭೆ ಕಲಾಪ ಮುಗಿಸುತ್ತೀರಿ. ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತದೆ. ಎಲ್ಲರೂ ಈ ಪರಿಜ್ಞಾನ ಇಟ್ಟುಕೊಳ್ಳಬೇಕು. ಆಗ ಇಂತಹ ಭಾಷಣ ಮಾಡುವುದಿಲ್ಲ. ನಾನು ನೀನು ಅನ್ನೋ ಭೇದ ಹಿಂಸೆ. ನಾನು ನೀನು ಒಂದು ಅಂದ ದಿನ ಅಹಿಂಸೆ ಎಂದು ಹೇಳಿದರು.