ಬೆಳಗಾವಿ :
ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡವೇ ಇರಬೇಕೆಂಬ ಹೋರಾಟದ ಕಾವು ಏರುತ್ತಿರುವ ಸಂದರ್ಭದಲ್ಲಿ ಹಾಗೂ ಮುಖ್ಯಮಂತ್ರಿಗಳೇ ಉನ್ನತ ಮಟ್ಟದ ಸಭೆ ನಡೆಸಿ ಫೆಬ್ರುವರಿ 28 ರ ಗಡುವು ನೀಡಿರುವಾಗ ಬೆಳಗಾವಿಯಲ್ಲಿ
60 ಪ್ರತಿಶತ ಮರಾಠಿ ರಾರಾಜಿಸಿದ “ಅನ್ನೋತ್ಸವ” ಫಲಕಗಳು ಅಣಕಿಸುತ್ತಿವೆ!

ಬರುವ ಜನೇವರಿ 5 ರಿಂದ 14 ರವರೆಗೆ ಹಿಂಡಲಗಾ ರಸ್ತೆಯ ಸಿಪಿಎಡ್ ಮೈದಾನದಲ್ಲಿ
ಅನ್ನೋತ್ಸವ ನಡೆಸುವ ಸಂಬಂಧದ ಫಲಕಗಳು ಬೆಳಗಾವಿ ಮಹಾನಗರದ
ಮೂಲೆ ಮೂಲೆಗಳಲ್ಲಿ ಕನ್ನಡ
ಹೋರಾಟಗಾರರನ್ನಷ್ಟೇ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ
ಅಣಕಿಸತೊಡಗಿವೆ !

ಈ ಫಲಕಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಮುಖ್ಯಮಂತ್ರಿಗಳ ಘೋಷಣೆಯ
ಮಾನಾಪಮಾನ ಕಾಪಾಡುವದು ಒಳ್ಳೆಯದು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.