ಬೆಳಗಾವಿಯ ಸಾಧಕರಿಗೆ ಪ್ರಶಸ್ತಿ ಘೋಷಣೆ

ವಿದ್ಯಾಧರ ಕನ್ನಡ ಪ್ರತಿಷ್ಠಾನ
(ಮುಂಬಯಿ- ಧಾರವಾಡ- ಹೈದರಾಬಾದ್)
“ವಿದ್ಯಾಧರ ಕನ್ನಡ ಪ್ರತಿಷ್ಠಾನದ ಕನ್ನಡ ನುಡಿ ತೇರು -೨೦೨೪” ರ ಕಾರ್ಯಕ್ರಮವನ್ನು ೨೮-೪-೨೦೨೪ ರಂದು ಬೆಳಗಾವಿಯ “ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಸಹಕಾರದೊಂದಿಗೆ
ನಡೆಸಲು ತೀರ್ಮಾನಿಸಿದ್ದು, ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವರಿಗೆ ಪ್ರತಿಷ್ಠಾನದ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ. ಪ್ರಶಸ್ತಿಗಳ ಹೆಸರು ಹಾಗೂ ಪುರಸ್ಕೃತರ ಹೆಸರುಗಳು ಹೀಗಿವೆ.

೧) “ಮಾತೋಶ್ರೀ ಜಾನಕಿಬಾಯಿ ರಂಗರಾವ ಮುಂತಾಲಿಕ ದೇಸಾಯಿ ಪ್ರಶಸ್ತಿ -೨೦೨೩”.
“ಶಿವಾಜಿ ಕಾಗಣೀಕರ”-
ಕಟ್ಟಣಬಾವಿ- ಬೆಳಗಾವಿ.

೨) “ಕನ್ನಡ ಮಹಿಳಾ ಚೇತನ-೨೦೨೩” ಪ್ರಶಸ್ತಿ.
ಮಂಗಲಾ ಮೆಟಗುಡ್ಡ.-
ಬೈಲಹೊಂಗಲ.

೩) “ಕನ್ನಡ ಸೇನಾನಿ-೨೦೨೩” ಪ್ರಶಸ್ತಿ.
ಮಹಾಂತೇಶ.ಯ.ಮೆಣಸಿನಕಾಯಿ
ಬೆಳಗಾವಿ.

೪) “ಕನ್ನಡ ಸಾಹಿತ್ಯ ಚೇತನ -೨೦೨೩” ಪ್ರಶಸ್ತಿ.
ಸ.ರಾ.ಸುಳಕೂಡೆ.
ಬೆಳಗಾವಿ.

೫) “ಕನ್ನಡ ಭೂಷಣ-೨೦೨೩” ಪ್ರಶಸ್ತಿ. ಆರ್.ಬಿ.ಬನಶಂಕರಿ.
ಬೆಳಗಾವಿ.

೬) “ಕನ್ನಡ ಪ್ರತಿಭಾ ದೀಪ್ತಿ -೨೦೨೩” ಪ್ರಶಸ್ತಿ.
ಶೋಭಾ ಬಸವರಾಜ ಮೇಟಿ.
ಮುಂಡರಗಿ.

ಈ ಪ್ರಶಸ್ತಿಗಳ ವಿತರಣೆಯನ್ನು ಪ್ರತಿಷ್ಠಾನದ “ಕನ್ನಡ ನುಡಿ ತೇರು-೨೦೨೪” ಹಬ್ಬದ ಸಂದರ್ಭದಲ್ಲಿ ಬೆಳಗಾವಿಯಲ್ಲೇ ಪ್ರದಾನಿಸುವ ಯೋಜನೆಯಿದೆ.
ಉಪನ್ಯಾಸಾದಿ ಇತರ
ವಿವಿಧ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ.

ಕಾರ್ಯಕ್ರಮದ ಸ್ಥಳ, ವಿವರ:
ದಿನಾಂಕ; ೨೮ – ೪ – ೨೦೨೪ (ಭಾನು ವಾರ)
ಸಮಯ: ಬೆಳಗಿನ ೧೦ ಗಂಟೆಗೆ
ಸ್ಥಳ: ಕನ್ನಡ ಸಾಹಿತ್ಯ ಭವನ. ಚನ್ನಮ್ಮ ವೃತ್ತ.
ಡಿ. ಸಿ. ಆಫೀಸ್ ಎದುರು
ಬೆಳಗಾವಿ.
ಇಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಹಾಗೂ
ಹೊಂಬೆಳಕು ಪ್ರಕಟಣೆಯಲ್ಲಿ ತಿಳಿಸಿವೆ.