ಬೆಳಗಾವಿ : ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನೆಯ ಪರಿಷತ್ತು ಪ್ರತಿ ವರ್ಷದಂತೆ ಈ ವರ್ಷವು ಕೊಡಮಾಡುವ ರಾಜ್ಯ ಮಟ್ಟದ ಡಾ.ಎಚ್ ನರಸಿಂಹಯ್ಯ (ಎಚ್ ಎನ್)ಪ್ರಶಸ್ತಿಗೆ ಬೆಳಗಾವಿ ಹನುಮಾನ ನಗರದ ನಿವಾಸಿ, ಪ್ರಾಧ್ಯಾಪಕ ಡಾ.ರವೀಂದ್ರ ವಿ. ಚಿಕ್ಕಮಠ ಆಯ್ಕೆಯಾಗಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿ ಅವಿರತ ಸೇವೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜನವರಿ 3 ಮತ್ತು 4 ರಂದು ಬೆಂಗಳೂರಿನ ವಿಜೆ ಇಂಟರ್ನ್ಯಾಷನಲ್ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯದ ವೈಜ್ಞಾನಿಕ ಸಂಶೋಧನಾ ಪರಿಷತ್ತು,ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಒಕ್ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಾಜ್ಯ ಮಟ್ಟದ 4 ನೆಯ ವೈಜ್ಞಾನಿಕ ಸಮ್ಮೇಳನ ಹುಲಿಕಲ್ ನಟರಾಜ ಅವರ ನೇತೃತ್ವದಲ್ಲಿ ಹಾಗೂ ಕನ್ನಡ ಖ್ಯಾತ ಅಭಿನೇತ್ರಿ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ. ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.