ಬೆಳಗಾವಿ: ಕಾಸರಗೋಡು ಮೂಲದ ಹಿರಿಯ ಪತ್ರಕರ್ತೆ ಕೀರ್ತನಾ ಕುಮಾರಿ (ಕೀರ್ತಿ ಶೇಖರ ಕಾಸರಗೋಡು) ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಬಸವರಾಜ ದೊಡ್ಮನಿ ಅವರು ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ ಈ ವಿಭಾಗದಲ್ಲಿ ಈ ಸಲದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಳೆದ ಮೂರು ದಶಕಗಳಿಂದ ಕೀರ್ತಿ ಶೇಖರ ಕಾಸರಗೋಡು ಅವರು ಸಂಯುಕ್ತ ಕರ್ನಾಟಕ, ಕರ್ಮವೀರ,ಗಡಿನಾಡು, ಮಂಗಳೂರು ಮಿತ್ರ, ಜನ ಈ ದಿನ ಪತ್ರಿಕೆಗಳಲ್ಲಿ ಮಂಗಳೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪತ್ರಕರ್ತರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅತ್ಯಂತ ಕ್ರಿಯಾಶೀಲ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕೀರ್ತಿ ಅವರು ಸ್ನೇಹಶೀಲ ಸ್ವಭಾವದ ಮೂಲಕ ಪತ್ರಿಕಾ ವಲಯದಲ್ಲಿ ಸ್ನೇಹ ಗಳಿಸಿಕೊಂಡಿದ್ದಾರೆ. ಇದೀಗ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಅನುಪಮ ಕೊಡುಗೆ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ.

ಮಾಧ್ಯಮ ಅಕಾಡೆಮಿಯ 2023, 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ತಿಳಿಸಿದ್ದಾರೆ.