ಅಮಾಸೆಬೈಲು :
ದಿನಾಂಕ 27-01-2024 ರಂದು ಶಾಲಾ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ನಾಮಫಲಕ ಅನಾವರಣ ಮತ್ತು ಇಂಗ್ಲೀಷ್ ತರಗತಿ ಕೊಠಡಿಯ ಆಕರ್ಷಕ ಗೋಡೆ ಬರೆಹ ಅನಾವರಣ ಕಾರ್ಯಕ್ರಮ ನಡೆಸಲಾಯಿತು. ಕ್ರೀಡಾಪಟುಗಳ ನಾಮಫಲಕ ಅನಾವರಣವನ್ನು ಇದರ ಪ್ರಾಯೋಜಕ ದುರ್ಗಾ ಎಂಟರ್ಪ್ರೈಸ್ ನ ಸಹಮಾಲಕ ಮಂಜುನಾಥ ಪೂಜಾರಿ ನಡೆಸಿಕೊಟ್ಟರು. ಇಂಗ್ಲೀಷ್ ತರಗತಿ ಗೋಡೆ ಬರೆಹ ಅನಾವರಣವನ್ನು ಅಮಾಸೆಬೈಲು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ನೆರವೇರಿಸಿಕೊಟ್ಟರು.
ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಮಾಸೆಬೈಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕುಲಾಲ್ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳ ಪಥಸಂಚಲನ ಕಾರ್ಯಕ್ರಮ ಸಂಪನ್ನಗೊಂಡಿತು.ಹಾಲಾಡಿ ಶಿಕ್ಷಣ ಸಂಯೋಜಕ ಶೇಖರ್ ಯು. ಅತಿಥಿ ಗಣ್ಯರೊಂದಿಗೆ ಗೌರವ ಸ್ವೀಕರಿಸಿದರು. ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಿಶನ್ ರಾಜ್ ಶೆಟ್ಟಿ ಕ್ರೀಡಾ ಧ್ವಜವನ್ನು ಆರೋಹಣ ಮಾಡಿದರು. ಎಸ್. ಡಿ. ಎಮ್ ಸಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಯವರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಟ್ಟಿನ ನವೀನ್ ಚಂದ್ರ ಶೆಟ್ಟಿ, ಗೀತಾ ಹೆಚ್. ಎಸ್. ಎನ್ ಪೌಂಡೇಶನ್ ಅಧ್ಯಕ್ಷ ಶಂಕರ್ ಐತಾಳ್, ಶಾಲೆಯ ಮುಖ್ಯಶಿಕ್ಷಕ ರತ್ನಾಕರ್ ಹೆಚ್ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ರತ್ನಾಕರ್ ಹೆಚ್ ಸ್ವಾಗತಿಸಿದರು. ಶಿಕ್ಷಕ ಶಶಿಧರ್ ಶೆಟ್ಟಿ ನಿರೂಪಿಸಿದರು. ಹಿರಿಯ ಸಹಶಿಕ್ಷಕಿ ಸವಿತಾ ವಂದಿಸಿದರು.