
ಬೆಳಗಾವಿ: ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬೆಳಗಾವಿಯ ಮತ್ತೋರ್ವ ವ್ಯಕ್ತಿ ಹೃದಯಾಘಾತದಿಂದ ಗುರುವಾರ ಸಾವನ್ನಪ್ಪಿದ್ದಾರೆ.
ಬೆಳಗಾವಿ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಠಾರ (61) ಮೃತಪಟ್ಟಿದ್ದಾರೆ.
ಪ್ರಯಾಗರಾಜ್ ದಿಂದ ಮರಳಿ ರೈಲಿನಲ್ಲಿ ಬರುವಾಗ ರವಿ ಜಠಾರ ಅವರಿಗೆ ಪುಣೆಯಲ್ಲಿ ಹೃದಯಾಘಾತವಾಗಿದೆ. ಪುಣೆಯಲ್ಲೆ ಸಂಬಂಧಿಕರು, ಸ್ನೇಹಿತರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಭಾನುವಾರ ಅವರು ರೈಲಿನಲ್ಲಿ ಸ್ನೇಹಿತರ ಜೊತೆಗೆ ಪ್ರಯಾಗರಾಜ್‌ಗೆ ತೆರಳಿದ್ದರು. ಯಾತ್ರೆ ಮುಗಿಸಿ ಮರಳಿ ಬರುವಾಗ ಈ ಘಟನೆ ನಡೆದಿದೆ.