ಬೆಳಗಾವಿ: ಗೋಕಾಕ ಸರಕಾರಿ ಪ್ರೌಢಶಾಲೆಯ ಸನಿಹದ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳು ಮತ್ತೊಬ್ಬ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ಗುರುವಾರ ನಡೆದಿದೆ.

ಸಂದೀಪ ಬಂಡಿವಡ್ಡರ ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ. ಗುರುವಾರ ಸಂಜೆ ಶಾಲೆ ಬಿಟ್ಟ ನಂತರ ಈತನಿಗೆ ಸಹಪಾಠಿಗಳೇ ಚಾಕು ಇರಿದಿದ್ದಾರೆ. ಪ್ರದೀಪನಿಗೆ ಆತನ ಸಹಪಾಠಿಗಳು ತಮ್ಮ ಬ್ಯಾಗ್ ತರಲು ಹೇಳಿದ್ದರು. ಆದರೆ, ಸಂದೀಪ ತಾನು ಬ್ಯಾಗ್ ತರುವುದಿಲ್ಲ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೂವರು ವಿದ್ಯಾರ್ಥಿಗಳು ಸಂದೀಪನ ಕುತ್ತಿಗೆ, ಕೈ ಮತ್ತು ಹೊಟ್ಟೆಗೆ ಇರಿದಿದ್ದಾರೆ. ನಂತರ ರಕ್ತ ನೋಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಗೋಳಾಡುತ್ತಿದ್ದ ಪ್ರದೀಪನನ್ನು ಶಿಕ್ಷಕರು ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗೋಕಾಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿದ್ಯಾರ್ಥಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.