
ಬೆಂಗಳೂರು: ಬುಧವಾರ ಕಾಶ್ಮೀರದ ಅನಂತನಾಗ್
ಜಿಲ್ಲೆಯ ಪಹಲ್ಲಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ಬಗ್ಗೆ ಮತ್ತೊಂದು ವಿಡಿಯೊ ಲಭ್ಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ.
ಬಂದೂಕುಧಾರಿ ಉಗ್ರನೊಬ್ಬ ಬಿಳಿ ಅಂಗಿ ಧರಿಸಿದ್ದ ವ್ಯಕ್ತಿಗೆ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡಿರುವುದು ವಿಡಿಯೊದಲ್ಲಿ ಕಾಣುತ್ತದೆ. ಆ ಉಗ್ರ ಮತ್ತೆ ಮುಂದೆ ಹೋಗಿ ಜನಸಮೂಹದ ಮೇಲೆ ದಾಳಿ ಮಾಡುತ್ತಾನೆ.
ದಾಳಿ ಮಾಡುವ ವೇಳೆ ಕೆಲ ಮಕ್ಕಳು ಆಟ ಆಡುತ್ತಿದ್ದರೆ ನಂತರ ಚೀರಾಟ ಕೇಳಿ ಬರುತ್ತದೆ. ಈ ದಾಳಿಯಲ್ಲಿ 26 ಜನ ಮೃತಪಟ್ಟು ಹಲವು ಜನ ಗಾಯಗೊಂಡಿದ್ದಾರೆ.
ಉಗ್ರರ ಭೇಟೆಗೆ ಭಾರತೀಯ ಸೇನಾಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆದಿದೆ.