ನೀವು ಈ ದೇಶದ ಅಮರ ಸೇನಾನಿ!

ಭಾರತ್ ಮಾತಾ ಕೀ ಜೈ…..

ಶ್ರೀ ನಂದಿಕೇಶ್ವರ ಫ್ರೆಂಡ್ಸ್ (ರಿ.)ಬೀಜಾಡಿ ಇವರು ತಮ್ಮ ವರ್ಷಂಪ್ರತಿ ನಡೆಯುವ ಶ್ರೀ ನಂದಿಕೇಶ್ವರ ದೇವರ ವಾರ್ಷಿಕ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸುಂದರವಾದ ಶ್ರೀ ಸಾಲಿಗ್ರಾಮ ಮೇಳದ ಭವ್ಯ ಸುಂದರ ವೇದಿಕೆಯಲ್ಲಿ ಮೂರು ವರ್ಷಗಳ ಹಿಂದೆ ಅನೂಪ್ ಪೂಜಾರಿ ಇವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.ಬಹಳ ಸುಂದರವಾಗಿ ಊರ ಹೆಚ್ಚಿನ ಹಿರಿಯರ ಸಮಕ್ಷಮದಲ್ಲಿ ಅನೂಪ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ನಮ್ಮೂರಿನ ಹೃದಯದಲ್ಲಿ ನಮಗೆಲ್ಲರಿಗೂ ಪುಟ್ಟ ಬಾಲಕ.
ಆ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರೆ ನಮಗೆಲ್ಲರಿಗೂ ಕರೆದು ಮಾತನಾಡಿಸಿದಷ್ಟು ಕಾಡುತ್ತಿದೆ ನೆನಪು.
ಈ ಪುಟ್ಟ ಹೆಜ್ಜೆ ಗುರುತು ಇಡುತ್ತಿರುವ ಬಹು ದೊಡ್ಡ ವ್ಯಕ್ತಿತ್ವದ ಅನೂಪ್ ಪೂಜಾರಿ ಇಡೀ ದೇಶವೇ ಹೆಮ್ಮೆ ಪಡುವಂತಹ ಯೋಧನಾಗಿ ಹೊರ ಹೊಮ್ಮಿ ರೋದು ಹುಟ್ಟೂರಿನ ವಿಶೇಷ.

ಶ್ರೀ ನಂದಿಕೇಶ್ವರ ಫ್ರೆಂಡ್ಸ್ ಇವರು ನಮ್ಮ ಬೀಜಾಡಿ ಸರ್ಕಲ್ ಬಳಿ ಸೇರುತ್ತಿರುವ ಅತಿ ದೊಡ್ಡ ಯುವ ಪಡೆ.ಯುವಕರ ಪಡೆ ಗೆ ಅನೂಪ್ ಪೂಜಾರಿ ಎಂದರೆ ಬಹಳ ಅಚ್ಚುಮೆಚ್ಚು.ಕಳೆದ 13 ವರುಷಗಳಿಂದ ನಮ್ಮ ಯುವ ಶಕ್ತಿ ಯೊಂದು ಇಡೀ ದೇಶವೇ ಹೆಮ್ಮೆ ಪಡುವಂತಹ ಯೋಧನಾಗಿ ಹೊರ ಹೊಮ್ಮಿರೋದು ಸುವರ್ಣ ಅಕ್ಷರದಲ್ಲಿ ಬರೆದಿಡಬಹುದಾದ ಸಂಗತಿ.ನಮ್ಮ ಅನೂಪ್ ಪೂಜಾರಿ ನಮ್ಮೂರಿನ ದೇಶ ಭಕ್ತಿಯ ಸಂಕೇತವಾಗಿ ಅಮರವಾಗಿ ಹುತಾತ್ಮ ನಾಗಿ ಇರುತ್ತಾನೆ.ಹುತಾತ್ಮ ಅಂದರೆ ಆತ್ಮ ಅಮರ ದೇಶಪ್ರೇಮಿ.
ಇಡೀ ಸೃಷ್ಟಿ ಯೇ ವಿಸ್ಮಯ ಗೊಳಿಸುವಂತಹ ಅಮರ ದೇಶಪ್ರೇಮಿ ಅನೂಪ್ ಪೂಜಾರಿ ಬೀಜಾಡಿ ಯ ಭಾರತ ರತ್ನ.ಕಂದಕಕ್ಕೆ ಉರುಳಿದ ಸೇನಾ ವಾಹನದಲ್ಲಿಯೇ ವೀರ ಮರಣ ಪಡೆದ ವೀರ ಯೋಧ.ಇಡೀ ಕುಟುಂಬ ವರ್ಗಕ್ಕೆ ನೋವನ್ನು ನಿಭಾಯಿಸುವ ಶಕ್ತಿ ಯನ್ನು ಭಾರತ ಮಾತೆ ನೀಡಲಿ ಎಂಬುವುದೇ ನಮ್ಮೆಲ್ಲರ ಬೇಡಿಕೆ.

✒️ಎಸ್ ಸತೀಶ್ ಕುಮಾರ್ ಕೋಟೇಶ್ವರ, ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ.ಅಧ್ಯಕ್ಷರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ (ರಿ.) ಕುಂದಾಪುರ.