
ಬೆಳಗಾವಿ : ಬೆಳಗಾವಿ ಹನುಮಾನ ನಗರದ ನಿವಾಸಿ ಅನೂಪ ಜಾಂಬೋಟಿ ಅವರು ರಾಜಸ್ಥಾನದ ಶ್ರೀ ರಾಮ ಪ್ರಸಾದ ಜುಭ್ರಮಲ್ ಟ್ರಬುವಾಲಾ ಜುಂಜುನ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ಡಾ. ಮುಖೇಶ ಕುಮಾರ ಅವರ ಮಾರ್ಗದರ್ಶನದಲ್ಲಿ “ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನೌಕರರ ನಿಶ್ಚಿತಾರ್ಥ ಮತ್ತು 4 ಕ್ಯೂ ಎಸ್ ಚೌಕಟ್ಟಿನ ನಡುವಿನ ಸಂಬಂಧದ ಬಗ್ಗೆ ವಿಶ್ಲೇಷಣಾತ್ಮಕ ” ಎಂಬ ವಿಷಯ ಮೇಲೆ ಅನೂಪ ಜಾಂಬೋಟಿಯವರು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಅವರು
ಸದ್ಯ ಕೆಎಲ್ಇ ಸಂಸ್ಥೆಯ, ವಾಣಿಜ್ಯ ಮಹಾವಿದ್ಯಾಲಯ (ಜಕ್ಕೇರಿ ಹೊಂಡ)ದಲ್ಲಿ ವಾಣಿಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನ ಪ್ರಾಂಶುಪಾಲರು,
ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ.