Join The Telegram | Join The WhatsApp |
ಸಂಘಟಿತರಾಗಿ ಉಳಿಸೋಣ ಬನ್ನಿ ಪುಣ್ಯಭೂಮಿ ಇಪ್ಪತ್ತು ಜಿನರ ಮೋಕ್ಷಭೂಮಿ ಪವಿತ್ರ ಶಿಖರ್ಜಿ ಕ್ಷೇತ್ರ
ಮೂಡುಬಿದಿರೆ :
ನಮ್ಮ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವಂತೆ ಜೈನ ಬಾಂಧವರು ತಮ್ಮ ಮನವಿಯನ್ನು ಪರಮ ಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜಾರ್ಖಂಡ್ ಹಾಗೂ ಕೇಂದ್ರ ಸರಕಾರಗಳಿಗೆ ರವಾನಿಸಿದರು.
ಮೂಡುಬಿದಿರೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಾದ ಜೈನ್ ಮಿಲನ್, ಮಹಾವೀರ ಸಂಘ, ಸರ್ವ ಮಂಗಳ ಜೈನ ಮಹಿಳಾ ಸಂಘ, ತೌಳವ ಇಂದ್ರ ಸಮಾಜ, ತ್ರಿಭುವನ್ ಯೂತ್ ಫ್ರೆಂಡ್, ಬಸದಿಗಳ ಸ್ವಚ್ಛತಾ ತಂಡಗಳ ಅಧ್ಯಕ್ಷರು, ಕಾರ್ಯದರ್ಶಿಗಳು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮೂಡುಬಿದ್ರೆಯ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ, ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ರವಾನಿಸಿದರು.
Join The Telegram | Join The WhatsApp |