Join The Telegram | Join The WhatsApp |
ಬೆಂಗಳೂರು:
ನಿನ್ನೆ ರಾತ್ರಿ ನಗರದ ಕುಂದನಹಳ್ಳಿ ಗೇಟ್ ಹೆಚ್ ಎ ಎಲ್ ಸಮೀಪ ಬೇಕರಿಯಲ್ಲಿ ಪುಡಿ ರೌಡಿಗಳಿಂದ ದಾಂಧಲೆ, ಅಮಾಯಕ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಿನ್ನೆ ನಡೆದ ಈ ಘಟನೆ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಇಂದು ಬೆಳಕಿಗೆ ಬಂದಿದೆ.ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನೇ ದಿನೇ ಜಾಸ್ತಿ ಆಗುತ್ತಿದ್ದು,ಪುಡಿ ರೌಡಿಗಳ ದರ್ಪವನ್ನು ಇಳಿಸಲು, ಬೈಂದೂರಿನ ಹುಡುಗರು ಸಹಾಯ ಹಸ್ತ ಚಾಚಿದ್ದಾರೆ,
ಕಷ್ಟಪಟ್ಟು ಸಾಲ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ದೂರದ ಬೆಂಗಳೂರಿಗೆ ಬಂದರೆ , ತಮ್ಮ ಜೀವನವನ್ನೇ ಹಾಳು ಮಾಡುತ್ತಿರುವ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕರಾವಳಿಯ ಉದ್ದಿಮೆದಾರರ ದಂಡೆ ಇಂದು ಸಂಜೆ ಐದು ಘಂಟೆಗೆ ಹೆಚ್ ಎ.ಎಲ್ ಪೋಲಿಸ್ ಠಾಣೆ ಮುಂದೆ ಜಮಾಯಸಿದ್ದರು.
ಕರ್ನಾಟಕ ರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷರು ಮತ್ತು ಉದ್ಯಮಿಯಾದ ಪ್ರವೀಣ್ ಕುಮಾರ್ ಶೆಟ್ಟಿಯವರ ಜೊತೆಗೂಡಿ
ಕರಾವಳಿ ಮೂಲದ ಹೋಟೆಲ್ ಮತ್ತು ಬೇಕರಿ ಉದ್ದಿಮೆದಾರರ ದಂಡೆ ಜೊತೆಗಿದ್ದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂತಹ ನಾಲಾಯಕ್ ಪುಂಡರನ್ನು , ಸಮಾಜ ಘಾತುಕ ಶಕ್ತಿಗಳನ್ನು ಈಗಲೇ ಮಟ್ಟಹಾಕಿ ಸಾಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿ ಗೃಹ ಇಲಾಖೆಯಲ್ಲಿ ಕಳಕಳಿಯ ಮನವಿ.
Join The Telegram | Join The WhatsApp |