Join The Telegram | Join The WhatsApp |
ಬೆಳಗಾವಿ-
ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾ ವಿದ್ಯಾಲಯದಲ್ಲಿ ಮಹಿಳೆಯರಿಗಾಗಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಾರ್ಷಿಕ ಕನಿಷ್ಠ ಶುಲ್ಕದಲ್ಲಿ ಆರು ತಿಂಗಳ ಅವಧಿಯ ಹೊಸ ನರ್ಸಿಂಗ್ ಕೊರ್ಸ ಅರಂಭಿಸಲಾಗಿದೆ. ಇದು ಜಿಲ್ಲೆಯಲ್ಲೆ ಪ್ರಥಮ ಮತ್ತು ಹೊಸ ಕೋರ್ಸ ಆಗಿದ್ದು ಈ ಕೊರ್ಸ ಮುಗಿಸಿದವರಿಗೆ ಅನೇಕ ದಂತ ವಿದ್ಯಾಲಯಗಳಲ್ಲಿ ಮತ್ತು ಖಾಸಗಿ ದಂತ ವೈದ್ಯಾಲಯದಲ್ಲಿ ವಿಪುಲ ಉದ್ಯೋಗವಕಾಶಗಳು ಸಿಗುವ ಸಾಧ್ಯತೆ ಇದ್ದು ಕೋರ್ಸಗೆ ಸ್ಥಳಿಯ ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಯುಸಿ ಅಥವ ತತ್ಸಮಾನ ಪಾಸಾದ ಕನಿಷ್ಠ 18 ವಯಸ್ಸು ತುಂಬಿದ ಯಾವುದೇ ಮಹಿಳಾ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ವಿವರಗಳಿಗೆ ಕೆ.ಎಲ್.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ನೆಹರು ನಗರ ಬೆಳಗಾವಿ ಮೊಬೈಲ್ ಸಂಖ್ಯೆ-9448490362 ಸಂರ್ಪಕಿಸಲು ಕೋರಲಾಗಿದೆ ಎಂದು ಪ್ರಾಂಶುಪಾಲರಾದ ಡಾ. ಅಲ್ಕಾ ಕಾಳೆ ತಿಳಿಸಿದ್ದಾರೆ.
Join The Telegram | Join The WhatsApp |