
ಸಾಲಿಗ್ರಾಮ : 52 ವರ್ಷಗಳಿಂದ ಯಕ್ಷಗಾನ
ತರಬೇತಿ ನಡೆಸುತ್ತಾ, ಯಕ್ಷಗಾನಕ್ಕೆ 3 ಸಾವಿರಕ್ಕೂ ಅಧಿಕ ಕಲಾವಿದರನ್ನು ನೀಡಿರುವ, ದಿ.ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರ ನಡೆಸುವ ಯಕ್ಷ ಗುರುಕುಲ ಪದ್ಧತಿ ವಸತಿ ಶಾಲೆಗೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
‘ಶಿಕ್ಷಣದೊಂದಿಗೆ ಯಕ್ಷಗಾನ’ ಧೈಯದೊಂದಿಗೆ ಸ್ಥಾಪಿಸಲ್ಪಟ್ಟಿರುವ ಈ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಬಾಲಕರಿಗೆ ಪ್ರವೇಶ ನೀಡಲಾಗುವುದು. ಅವಕಾಶ ಪಡೆದವರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದು. ಉಚಿತ ಊಟ, ಉಪಹಾರ, ವಸತಿ ವ್ಯವಸ್ಥೆಯೊಂದಿಗೆ ಯಕ್ಷಗಾನ ಭಾಗವತಿಕೆ, ಮದ್ದಲೆ, ಚೆಂಡೆ, ನೃತ್ಯ ಶಿಕ್ಷಣ ನೀಡಲಾಗುವುದು.
ಗುರುಕುಲ ಪದ್ಧತಿಯಂತೆ ನಡೆಸುವ ಈ ಶಾಲೆಗೆ ಸೇರ ಬಯಸುವವರು ಮಾರ್ಚ್ 30ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ಅರ್ಜಿಯನ್ನು ಕಾರ್ಯದರ್ಶಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಅಂಚೆ, ಐರೋಡಿ 576226, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರಿಗೆ ಕಳುಹಿಸಬಹುದು. ಮಾಹಿತಿಗೆ 9880605610 ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.