Join The Telegram | Join The WhatsApp |
ಬೆಂಗಳೂರು-
ಪಿಎಂ ಕುಸುಮ್ ಯೋಜನೆಯಡಿ ಸೌರ ಚಾಲಿತ ಕೃಷಿ ಪಂಪ್‍ಸೆಟ್‍ಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ.
ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಲು ರೈತರು ಅರ್ಜಿ ಹಾಕಬಹುದು. ಅರ್ಜಿಯನ್ನು ಕೆ. ಆರ್. ಇ. ಡಿ. ಎಲ್. ಅಧಿಕೃತ ಜಾಲತಾಣದ ಮೂಲಕ ಹಾಕಬಹುದು.
ಅರ್ಜಿ ಸಲ್ಲಿಕೆ ಮಾಡುವ ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿ ಸಿದ್ದವಿರಬೇಕು. ಹೊಸ ಕೃಷಿ ಪಂಪ್‍ಸೆಟ್‍ಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್‍ಸೆಟ್‍ಗಳು ಅರ್ಹವಿರುವುದಿಲ್ಲ).
ಅರ್ಜಿದಾರರು ಒಂದು ಸೌರ ಪಂಪ್‍ಸೆಟ್‍ಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‍ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿದಾರರು ಅವರ ವಂತಿಗೆಯನ್ನು ಡಿಡಿ ಮೂಲಕವೇ ಸಲ್ಲಿಸುವುದು. ಚೆಕ್ ಅಥವಾ ಇತರೆ ಆನ್‍ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು.
ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ 5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷಚೇತನ ವರ್ಗದವರ ವಂತಿಗೆಯನ್ನು ಪಾವತಿಸಲಾಗುವುದು.
ಅರ್ಜಿದಾರರು ಪಾವತಿಸಬೇಕಾದ ವಂತಿಗೆಗಳು: 3 ಹೆಚ್‌ಪಿ ಸಾಮರ್ಥ್ಯ ಪಂಪ್‍ಸೆಟ್‍ಗೆ ಸಾಮಾನ್ಯ ವರ್ಗದವರು ಘಟಕದ ವೆಚ್ಚ ಶೇ 40ರಷ್ಟು 71,422 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಘಟಕದ ವೆಚ್ಚ ಶೇ 20ರಷ್ಟು 35,711ರೂ. ಪಾವತಿಸಬೇಕು.
5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,01,056, ಪ.ಜಾತಿ ಮತ್ತು ಪ.ಪಂಗಡದವರು ರೂ. 50,528, 7.5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,45,710, ಪ.ಜಾತಿ ಮತ್ತು ಪ.ಪಂಗಡದವರು ರೂ.72856 ಪಾವತಿ ಮಾಡಬೇಕು.
10 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ. 2,50,292, ಪ.ಜಾತಿ ಮತ್ತು ಪ.ಪಂಗಡದವರು ರೂ.1,77,438 ಪಾವತಿಸಬೇಕು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ 80ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತ ಬಾಂಧವರಿಗೆ ಶೇ 60ರಷ್ಟು ಸಬ್ಸಿಡಿ ಲಭ್ಯವಿದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಕೆ. ಆರ್. ಇ. ಡಿ. ಎಲ್. ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದುದ. ಕರೆ ಮಾಡಲು ದೂರವಾಣಿ ಸಂಖ್ಯೆ 9986025252, 9742310108.
ಸೌರ ವಿದ್ಯುತ್‌ಗೆ ಆದ್ಯತೆ; ನವೀಕರಿಸಬಹುದಾದ ಶಕ್ತಿಯ ಮೂಲಗಳು ಭವಿಷ್ಯದ ಪರ್ಯಾಯ ಇಂಧನಗಳಾಗಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಸೌರ ವಿದ್ಯುತ್‌ಗೆ ಆದ್ಯತೆ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ 30 ಮಿಲಿಯನ್ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಕುಸುಮ್ ಯೋಜನೆ ಆರಂಭಿಸಿದೆ.
ಪಿಎಂ ಕುಸುಮ್ ಎಂದರೆ ‘ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾ ಅಭಿಯಾನ’. ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ನೀರಾವರಿಗಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ವಿಳಾಸದ ಪುರಾವೆ, ಪಾಸ್‌ಪೋರ್ಟ್ ಅಳತೆಯ ಫೋಟೋ ಅಗತ್ಯವಿದೆ.
Join The Telegram | Join The WhatsApp |