ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ.ಎನ್.ಕೋಟೀಶ್ವರ್‌ಸಿಂಗ್ ಮತ್ತು ಆ‌ರ್.ಮಹಾದೇವನ್ ಅವರನ್ನು ಮಂಗಳವಾರ ನೇಮಿಸಲಾಗಿದೆ. ಇವರಿಬ್ಬರ ನೇಮಕದಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಎಲ್ಲಾ 34 ಸ್ಥಾನಗಳು ಭರ್ತಿಯಾದಂತಾಗಿವೆ. ಪ್ರಸ್ತುತ ಜಮ್ಮು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯಾಗಿರುವ ಎನ್. ಕೋಟೀಶ್ವರ್ ಸಿಂಗ್ ಸುಪ್ರೀಂ ಕೋರ್ಟಿನಲ್ಲಿ ಮೊದಲ ಮಣಿಪುರ ನ್ಯಾಯಾಧೀಶರೆನಿಸಿಕೊಳ್ಳುತ್ತಾರೆ. ನ್ಯಾ.ಮಹಾದೇವನ್‌ ಪ್ರಸ್ತುತ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.