This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಅರಭಾವಿ ಮಂಡಲ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಪೂರ್ವಭಾವಿ ಸಭೆಗೆ ಚಾಲನೆ

Join The Telegram Join The WhatsApp

ಗೋಕಾಕ : 

ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕರೆ ನೀಡಿದರು.

ಇಲ್ಲಿಯ ಅರಭಾವಿ ಮಂಡಲ ಬಿಜೆಪಿ ವತಿಯಿಂದ ಸೋಮವಾರದಂದು ಜರುಗಿದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಪ್ರಗತಿಪರ ಕಾರ್ಯಗಳನ್ನು ಮತದಾರರಿಗೆ ವಿವರಣೆ ಮಾಡುವಂತೆ ತಿಳಿಸಿದರು.

ಅರಭಾವಿ ಹಾಗೂ ಗೋಕಾಕ ಮತಕ್ಷೇತ್ರಗಳಲ್ಲಿ ಸಾಹುಕಾರ ಅವರ ಪ್ರಭಾವದಿಂದಾಗಿ ಬಿಜೆಪಿ ಅತ್ಯಂತ ಪ್ರಭಾವಶಾಲಿಯಾಗಿದೆ. ಜೊತೆಗೆ ಅವರು ಮಾಡಿರುವ ಪ್ರಗತಿಪರ ಕಾರ್ಯಗಳ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಆದರೂ ಪಕ್ಷದ ನಿರ್ದೇಶನದಂತೆ ಪ್ರತಿ ಶಕ್ತಿಕೇಂದ್ರಗಳಿಗೆ ವಿಸ್ತಾರಕರನ್ನು ನೇಮಕ ಮಾಡಲಾಗಿದೆ. ಅರಭಾವಿ ಕ್ಷೇತ್ರದಲ್ಲಿ ಚುನಾವಣೆ ಮುಗಿಯುವವರೆಗೂ ವಿಸ್ತಾರಕರು ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಆದ್ದರಿಂದ ಪಕ್ಷದ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಪ್ರಚಾರಪಡಿಸಬೇಕು. ನಮ್ಮ ಪಕ್ಷ ಮತ್ತೇ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ ಮತ್ತು ಸುಭಾಸ ಪಾಟೀಲ ಮಾತನಾಡಿ, ಬಿಜೆಪಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಬಲ ಪಕ್ಷವಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ರಾಜ್ಯದಲ್ಲಿ ಬಹುಮತ ಪಡೆದು ಮತ್ತೇ ಅಧಿಕಾರಕ್ಕೆ ಬರಲಿದೆ. ಶಕ್ತಿ ಕೇಂದ್ರಗಳಿಗೆ ಒಬ್ಬರಂತೆ ವಿಸ್ತಾರಕರನ್ನು ನೇಮಿಸಬೇಕು. ವಾಟ್ಸಫ್ ಗ್ರುಫ್‌ಗಳನ್ನು ರಚನೆ ಮಾಡಬೇಕು. ಪೇಜ್ ಪ್ರಮುಖರನ್ನು ನೇಮಿಸುವ ಮೂಲಕ ಮತಗಟ್ಟೆಗಳಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸಬೇಕು. ಜೊತೆಗೆ ಈ ಭಾಗದ ಜನಪ್ರಿಯ ಶಾಸಕರಾಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕೊಳದೂರ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಲ ವಿಸ್ತಾರಕ ವೆಂಕಟೇಶ ಲಾಳೆ, ಪ್ರಕಾಶ ಮಾದರ, ಆನಂದ ಮೂಡಲಗಿ, ಮುತ್ತೆಪ್ಪ ಮನ್ನಾಪೂರ, ಮಂಜುಳಾ ಹಿರೇಮಠ, ಬಸು ಹಿಡಕಲ್, ಭೀಮಶಿ ಮಾಳೇದವರ, ಪರಸಪ್ಪ ಬಬಲಿ, ಜಿಲ್ಲಾ ಪದಾಧಿಕಾರಿಗಳು, ಅರಭಾವಿ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರಾದ ವಾಸಂತಿ ತೇರದಾಳ, ಪ್ರಮೋದ ನುಗ್ಗಾನಟ್ಟಿ, ಸಂಗಣ್ಣ ಕಂಠಿಕಾರ, ಇಕ್ಬಾಲ್ ಸರ್ಕಾವಸ್, ಯಲ್ಲಾಲಿಂಗ ವಾಳದ, ತಮ್ಮಣ್ಣ ದೇವರ, ನಾಗರಾಜ ಕುದರಿ, ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರು ಉಪಸ್ಥಿತರಿದ್ದರು.

ಭಾರತ ಮಾತೆ, ಪಂ. ದೀನದಯಾಳ ಉಪಾಧ್ಯೆಯ, ಶ್ಯಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.


Join The Telegram Join The WhatsApp
Admin
the authorAdmin

Leave a Reply