Join The Telegram | Join The WhatsApp |
ಬೆಂಗಳೂರು-
ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯದ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ಬೊಮ್ಮಾಯಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
2019ರಲ್ಲಿ ರಾಜ್ಯದ ಪೊಲೀಸ್ ನೇರ ನೇಮಕಾತಿಯಲ್ಲಿ ಒಂಬತ್ತು ಹುದ್ದೆಗಳಿಗೆ ಶೇ.25ರಷ್ಟುಕಡ್ಡಾಯ ಮಹಿಳಾ ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತ್ತು. ಈ ಹಿಂದೆ ಎರಡು ಹುದ್ದೆಗಳಿಗೆ ಮಾತ್ರ ಶೇ.20 ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಆ ಎರಡೂ ಹುದ್ದೆ ಸೇರಿದಂತೆ ಒಟ್ಟು ಒಂಬತ್ತು ಹುದ್ದೆಗಳಿಗೆ ಶೇ.25 ರಷ್ಟುಮೀಸಲಾತಿ ಕಲ್ಪಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು.
Join The Telegram | Join The WhatsApp |