ಅರಸಮ್ಮಕಾನು : ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ(ಶ್ರೀದೇವರತಿ) ದೇವಳದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ ಜ.15 ನೇ ಸೋಮವಾರ ಮಕರ ಸಂಕ್ರಮಣದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತಂತ್ರಿ. ವೇ.ಮೂ.ಗಿರೀಶ ಸೋಮಯಾಜಿ ಪಡುವಳ್ಳಿ, ಅರ್ಚಕ ನಾಗರಾಜ ಬಾಯರಿ ಗಂಗಡಬೈಲು ನೇತ್ರತ್ವದಲ್ಲಿ ಅರ್ಚಕ ವೃಂದವರ ಸಹಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಬೆಳಿಗ್ಗೆ ಶ್ರೀ ಗುರು ಗಣಪತಿ ಪ್ರಾರ್ಥನೆ,ಪುಣ್ಯಾಹವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ಚಂಡಿಕಾ ಹೋಮ, ವೇದ ಪಾರಾಯಣ, ಗಣಹೋಮ, ಗಂ 9 ರಿಂದ ಹಣ್ಣು ಕಾಯಿ, ಹರಿವಾಣ ನೈವೇದ್ಯ, ತುಲಾಭಾರ ಸಂಕಲ್ಪ ಆರಂಭ, ಗಂ 11.30 ರಿಂದ ತುಲಾಭಾರಸೇವೆ, ಮಧ್ಯಾಹ್ನ ಗಂ 12 ಕ್ಕೆ ಉತ್ಸವ ಬಲಿ, ಮಹಾಪೂಜೆ, ಗಂ. 1ರಿಂದ ಅರಸಮ್ಮಕಾನು ನೆಲ್ಲಿಬೆಟ್ಟು ಕರಿಯಣ್ಣ ಶೆಟ್ಟಿ ಮತ್ತು ಮಕ್ಕಳಿಂದ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ, ಬೆಳ್ವೆ ಯಳಂತೂರು ವನಜ ಭೋಜರಾಜ ಶೆಟ್ಟಿಯವರಿಂದ ಲಡ್ಡುಸೇವೆ, ರಾತ್ರಿ ಗಂ.6 ರಿಂದ ಪಂಚರತಿ ಮಹಿಳಾ ಭಜನಾ ಮಂಡಳಿ, ಅರಸಮ್ಮಕಾನು, ಶ್ರೀದುರ್ಗಾಂಬಾ ಭಜನಾ ಮಂಡಳಿ,ಅರಸಮ್ಮಕಾನು ಇವರಿಂದ ಭಜನೆ, ಗಂ 8.30 ರಿಂದ ನಳಿನಿ ವಿಜಯಕುಮಾರ್ ಶೆಟ್ಟಿ ಮತ್ತು ಮಕ್ಕಳು ಕೋಟೆಮನೆ ಸಹಕಾರದಲ್ಲಿ ಶ್ರೀದೇವರತಿ ಯಕ್ಷ ಬಳಗ ಅರಸಮ್ಮಕಾನು-ಶೇಡಿಮನೆ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ, ಗಂ 11 ಕ್ಕೆ ಶ್ರೀ ದೇವಿ ದರ್ಶನ, ಕಲ್ಕುಡ ದರ್ಶನ, ಶ್ರೀದೇವಿ ಮತ್ತು ಕಲ್ಕುಡ ಮುಖಾಮುಖಿ, ಗಂ.11.30 ಕ್ಕೆ ಕೆಂಡೋತ್ಸವ,ದಾಸನಹೊಳೆ ಪಾರ್ವತಿ ವಿಠಲ ಕುಲಾಲ್ ಇವರ ಸೇವೆಯ ಕಲ್ಕುಡ ಮತ್ತು ಸತ್ಯದೇವತೆ ಸಿರಿ ಸಿಂಗಾರ ಕೋಲ, ಗಂ 2.30 ಕ್ಕೆ ಶ್ರೀದೇವಿಯ ಸನ್ನಿಧಿಯಲ್ಲಿ ರಂಗಪೂಜೆ ಸೇವೆ.
ಜ.16 ರ ಮಂಗಳವಾರ ಬೆಳಗಿನ ಜಾವ ಶ್ರೀದೇವಿಯ ದರ್ಶನ, ಭೂತಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ ಮೂಡಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.