ಅರಸಮ್ಮಕಾನು :
ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವಶಕ್ತಿ ಯುವಕ ಮಂಡಲ ಅರಸಮ್ಮಕಾನು, ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ವೆ, ಮಣಿಪಾಲ
ದಂತ ವೈದ್ಯಕೀಯ ಕಾಲೇಜು ತಜ್ಞ ವೈದ್ಯರ ಸಹಕಾರದಲ್ಲಿ ಉಚಿತವಾಗಿ ದಂತ ಚಿಕಿತ್ಸಾ ಶಿಬಿರ ಮತ್ತು ಅಂಗಾಂಗ ದಾನ ನೋಂದಣಿ ಶಿಬಿರ ಫೆ.25 ನೇ ಭಾನುವಾರ ಬೆಳಿಗ್ಗೆ ಗಂ. 9 ರಿಂದ 11 ರವರೆಗೆ
ಅರಸಮ್ಮಕಾನು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಅಸಕ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅರಸಮ್ಮಕಾನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.