
ಅರಸಮ್ಮಕಾನು : ಅರಸಮ್ಮಕಾನು ಎಂಬಲ್ಲಿ ಸಮಾನ ಮನಸ್ಕರು ಸೇರಿ ಸೇವೆ ಮತ್ತು ಸಂಸ್ಕಾರದ ಉದ್ಧೇಶದೊಂದಿಗೆ 2023 ರಲ್ಲಿ ಸ್ಥಾಪಿಸಿದ ನೆರಳು ಚಾರಿಟೇಬಲ್ ಟ್ರಸ್ಟ್,ರಿ. ಅರಸಮ್ಮಕಾನು ಶೇಡಿಮನೆ ಇದರ ನೆರವಿನ ನೆರಳು ಕಾರ್ಯಕ್ರಮದ ಪ್ರಯುಕ್ತ ಸಹಾಯಹಸ್ತ, ಸನ್ಮಾನ, ನುಡಿ ತೋರಣ, ಸಂಗೀತಗಾನ ಸಂಭ್ರಮವು ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಳದಲ್ಲಿ ಜ.19 ನೇ ಭಾನುವಾರ ಸಂಜೆ 5 ರಿಂದ ನಡೆಯಲಿದೆ.
ಅನಾರೋಗ್ಯ ಪೀಡಿತ ಆರ್ಥೀಕ ಸಂಕಷ್ಟದಲ್ಲಿರುವ 10 ಕುಟುಂಬಗಳಿಗೆ ತಲಾ 10 ಸಾವಿರ ಆರ್ಥಿಕ ನೆರವು, ವಿದ್ಯುತ್ ಸಂಪರ್ಕವಿಲ್ಲದ 2 ಮನೆಗಳಿಗೆ ಸೋಲಾರ್ ದೀಪದ ಉಚಿತ ಕೊಡುಗೆ ಸೇರಿದಂತೆ ಇನ್ನಿತರ ನೆರವು ನೀಡಿದೆ. ಪ್ರಸ್ತುತ ನೆರವಿನ ನೆರಳು ಕಾರ್ಯಕ್ರಮದಲ್ಲಿ ನಾನಾ ತೊಂದರೆಯಲ್ಲಿರುವ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ 25 ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ.
ಜ.19 ನೇ ಭಾನುವಾರ ಸಂಜೆ 5 ಕ್ಕೆ ದಿನೇಶ್ ಶೆಟ್ಟಿ ಬೆಪ್ಡೆ,ಗಣಪತಿ ಶೆಟ್ಟಿ ಬೆಪ್ಡೆ ಹಾಗೂ ಬಳಗದವರಿಂದ ಯಕ್ಷ-ಗಾನ ವೈಭವ, ಸಂಜೆ 6 ಕ್ಕೆ ನೆರಳು
ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಧಕೃಷ್ಣ
ಕ್ರಮಧಾರಿ ಅಧ್ಯಕ್ಷತೆಯಲ್ಲಿ ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ನೆರವಿನ ನೆರಳು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಿವೃತ್ತ ನ್ಯಾಯಾಧೀಶ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಪ್ರಧಾನ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೈದರಾಬಾದ್ ಹೊಟೇಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ,ಬೆಳ್ವೆ ಶ್ರೀ ಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ, ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಳದ ಅರ್ಚಕ ನಾಗರಾಜ ಬಾಯರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮೂಡುಬೈಲ್, ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಭಾಗವಹಿಸಲಿದ್ದಾರೆ.
ರಾತ್ರಿ 8 ರಿಂದ ಸಹಭೋಜನ, 8.30ರಿಂದ
ಪುತ್ತೂರು ಜಗದೀಶ್ ಆಚಾರ್ಯ ಮತ್ತು
ತಂಡದವರಿಂದ ಸಂಧ್ಯಾರಾಗ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.