ಅರಸಮ್ಮ ಕಾನು: ಪಶ್ಚಿಮ ಘಟ್ಟದ ತಪ್ಪಲಿನ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ ಅಗಳಿಬೈಲು ಎಂಬಲ್ಲಿ ನಯನ ಮನೋಹರ ಪರಿಸರದಲ್ಲಿ ನದಿ ತಟದಲ್ಲಿ ಪ್ರಶಾಂತ ಸ್ಥಳದಲ್ಲಿ ನೆಲೆಯಾಗಿರುವ ಪರಶುರಾಮ ಸೃಷ್ಟಿಯಲ್ಲೇ ಒಂದು ಅಪರೂಪದ ಪುಣ್ಯ ಕ್ಷೇತ್ರ ಶ್ರೀ ಕೋಟೆರಾಯ ಸ್ವಾಮಿ ದೇವಸ್ಥಾನ ಅಗಳಿಬೈಲು ಇದೊಂದು ಬಹಳ ಅಪರೂಪದ ಮಹಿಮೆಯ ಕ್ಷೇತ್ರವಾಗಿದ್ದು ಈ ಕೋಟೆರಾಯ ಸ್ವಾಮಿಯ ಕ್ಷೇತ್ರದಲ್ಲಿ ಕ್ಷೇತ್ರದ ಸಾನಿಧ್ಯ ವೃದ್ಧಿ, ಹಾಗೆ ಅಭಿವೃದ್ಧಿ ದೃಷ್ಟಿಯಿಂದ ದಿನಾಂಕ: 21.3.2025 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ದೇವರಿಗೆ ನವಕ ಪ್ರಧಾನ ಹೋಮ ಕಲಶಾಭಿಷೇಕ ಸೇವೆ ಹಾಗೂ ಮಧ್ಯಾಹ್ನ 12.30 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದ್ದು. ಊರ ಪರವೂರ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶೇಷ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿ ಈ ದೇವತಾ ಕಾರ್ಯದಲ್ಲಿ ಭಾಗಿಗಳಾಗಿ ತಮ್ಮ ಉದಾರ ತನು ಮನ ಧನ ಸಹಕಾರ ನೀಡಿ ಈ ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.