
ಅರಿಕೋಡಿ : ಬೆಳ್ತಂಗಡಿ
ತಾಲೂಕು ಬೆಳಾಲು ಗ್ರಾಮದ ಅರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ ಫೆಬ್ರವರಿ 13 ರಂದು ದೇವಿಗೆ ಮಹಾಪೂಜೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಹರೀಶ ಅರಿಕೋಡಿ ಅವರು ತಿಳಿಸಿದ್ದಾರೆ.ಫೆ.13 ರಂದು ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ವಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ.
ಫೆ.14 ರಂದು ರಾತ್ರಿ 8 ರಿಂದ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರ ದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ ನೇಮಸೇವೆ ನಡೆಸಲಾಗುತ್ತಿದೆ. ರಾತ್ರಿ 12 ಕ್ಕೆ ಲಕ್ಕಿಡಿಪ್ ಡ್ರಾ ನಡೆಯಲಿದೆ ಎಂದು ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ ಅರಿಕೋಡಿ ಅವರು ತಿಳಿಸಿದ್ದಾರೆ.