ಮಂಗಳೂರು : ಶ್ರೀ ನಾಗನಾಗಿಣಿ ನಾಗಬ್ರಹ್ಮ ಕ್ಷೇತ್ರ ( ರಿ) ಅರ್ಕುಳ ಮೇರ್ಲಪದವು ಇವರ ನೂತನ ಪಾಕಶಾಲೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 2 ಲಕ್ಷ ರೂಪಾಯಿಗಳ ಅನುದಾನದ ಮಂಜೂರು ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಅವರು ಶ್ರೀ ನಾಗನಾಗಿಣಿ ಕ್ಷೇತ್ರ ಆಧ್ಯಕ್ಷ ಸತೀಶ್ ಕೆ, ಮಾಜಿ ಆಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಸಮಿತಿ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶ್, ಮೇಲ್ವಿಚಾರಕಿ ಸುಜಾತ, ಸೇವಾಪ್ರತಿನಿಧಿ ಸತ್ಯಾಕ್ಷಿ ಅವರು ಈ ಸುಸಂದರ್ಭಕ್ಕೆ ಸಾಕ್ಷಿ ಯಾದರು.