
ಸಂಕೇಶ್ವರ : ಅಂತಾರಾಜ್ಯ ಕಳ್ಳನೋರ್ವನನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತನಿಂದ 14.71 ರೂ. ಲಕ್ಷ ಮೌಲ್ಯದ 101 ವಿವಿಧ ಕಂಪನಿಯ ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಖದೀಮನನ್ನು ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಬಾಣಸವಾಡದ ನವೀನ ಸಂಪತ್ ಎಂಬುವ ಈ ಮೊಬೈಲ್ ಕಳ್ಳತನ ಪ್ರಕರಣ ದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ.
ಸಂಕೇಶ್ವರ ಪೊಲೀಸರು ಹಿರಣ್ಯಕೇಶಿ ಕಾರ್ಖಾನೆ ಬಳಿಯಲ್ಲಿ ವಾಹನಗಳ ತಪಾಸನೆ ಮಾಡುವ ಸಂದರ್ಭದಲ್ಲಿ ಈ ಖದೀಮ ತೆಗೆದುಕೊಂಡು ಹೋಗುತ್ತಿದ್ದ ಕಾರಿನಲ್ಲಿ ವಿವಿಧ ಕಂಪನಿಯ ಮೊಬೈಲ್ ಗಳು ಪತ್ತೆಯಾಗಿವೆ.
ಬಳಿಕ ಬಂಧಿನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಬಂಧಿತನ ಬಳಿ ಇದ್ದ 11.71 ರೂ. ಲಕ್ಷ ಮೌಲ್ಯದ 101 ಮೊಬೈಲ್ ಗಳು ಹಾಗೂ 3 ಲಕ್ಷ ಮೌಲ್ಯದ ಹುಂಡಾ ಕಂಪನಿಯ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆ ಗೋಕಾಕ ಡಿಎಸ್ ಪಿ ರವಿ ನಾಯಕ ಹಾಗೂ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಅವರ ಮಾರ್ಗದರ್ಶನ ದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ
ಪಿಎಸ್ ಐ ( ಕಾ,ಸು) ಆರ್.ಎಸ್. ಖೋತ, ಪಿ.ಎಸ್.ಐ(ಅ.ವಿ) ಎ.ಕೆ.ಸೊನ್ನದ, ಸಿಬ್ಬಂದಿಗಳಾದ ಎಸ್.ಎಲ್.ಗಳತಗಿ ಸಿಎಚ್‌ಸಿ-2525, ಎಸ್.ಎ.ಕಾಂಬಳೆ ಸಿಎಚ್‌ಸಿ-2233, ವಿ.ಬಿ.ಮುರಕಿಭಾವಿ ಸಿಎಚ್‌ಸಿ-3948, ಎಸ್.ಎಮ್.ಯಕ್ಸಂಬಿ ಸಿಎಚ್‌ಸಿ-2558, ಬಿ.ಟಿ.ಪಾಟೀಲ ಸಿಪಿಸಿ-2790 ಇವರಿಗೆ ಬೆಳಗಾವಿಯ ಎಸ್.ಪಿ ಭೀಮಾಶಂಕರ ಗುಳೇದ
ಅವರು ಉತ್ತಮ ಕಾರ್ಯಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿ ಪ್ರಶಂಸಿರುತ್ತಾರೆ.