Join The Telegram | Join The WhatsApp |
ಬೆಂಗಳೂರು:
ಮಾಂಡೌಸ್ ಚಂಡಮಾರುತದ ನಂತರ ವಾತಾವರಣದ ಬದಲಾವಣೆಗೆ ಜನ ಕಂಗಾಲಾಗಿದ್ದಾರೆ. ಹವಮಾನ ಇಲಾಖೆ ಈಗ ಮತ್ತೆ ಮಳೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಚಳಿ ಜೊತೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ಮಾಂಡೌಸ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳ ಮೇಲೆ ಆಗಿದ್ದು, ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಚಳಿಯ ವಾತಾವರಣ ಇದೆ.
ಡಿಸೆಂಬರ್ 15ರವರೆಗೂ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡ ಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ.
ಕರಾವಳಿ ಭಾಗದ ಮೀನುಗಾರರಿಗೆ ಡಿಸೆಂಬರ್ 15ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಮಳೆಯಾಗುವ ವರದಿಯನ್ನ ಹವಾಮಾನ ಇಲಾಖೆ ನೀಡಿದೆ.
Join The Telegram | Join The WhatsApp |