Join The Telegram | Join The WhatsApp |
ಅಥಣಿ-
ಪೋಷಣ ಅಭಿಯಾನದ ಭಾಗವಾಗಿ ಮಕ್ಕಳು ಮಾನಸಿಕವಾಗಿ ಸಾಮಾಜಿಕವಾಗಿ ಬಲಗೋಳ್ಳುವರು ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರು ಶರಣಗೌಡಾ ಎಸ. ಗೂಗಲ್ ಹೇಳಿದರು.
ಅವರು ಅಥಣಿ ತಾಲೂಕಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತೆವರಟ್ಟಿ ಯನ್ನಿಯಲ್ಲಿ ನಡೆದ
ಮಕ್ಕಳ ಬೆಳವಣಿಗೆಗೆ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಅಭಿಯಾನದ ಸದುಪಯೋಗ ವನ್ನು ಮಕ್ಕಳಿಗೆ ಮನಪುರ್ವಕ ಬಳಸಬೇಕು ಎಂದು ಸಭೆ ಉದ್ದೇಶಿಸಿ ಮಾತನಾಡಿದರು.
ಅತಿಥಿಯಾಗಿ ಭಾಗವಹಿಸಿದ್ದ ದೇಮಪ್ಪಾ ಮುಗಡ್ಲಿ ತಾಲೂಕಾ ಕಾರ್ಯಕ್ರಮ ವೆವಸ್ಥಾಪಕರು ಸಾಮಾಜಿಕ ಪರಿಶೋದಣೆ ಅಥಣಿ ತಾಲೂಕು ಶಿಕ್ಷಣ ಇಲಾಖೆಯ ಮಕ್ಕಳಿಗೆ ಶಿಕ್ಷಣದ ಅಭಿರುಚಿ ಹಾಗೂ ಸರ್ದಡ ಭವಿಷ್ಯ ನಿರ್ಮಾಣ ಮಾಡುವುದೆ ಸರ್ಕಾರದ ಉದ್ದೇಶ ವಾಗಿದೆ. ಇಂತಹ ಅಭಿಯಾನಗಳು ಸದುಪಯೋಗಗೋಂಡಾಗ ಯೋಜನೆಗಳು ಸಫಲವಾಗುತ್ತದೆ ಎಂದರು.
ಮಕ್ಕಳಿಗೆ ಹಾಲು, ತತ್ತಿ, ಬಾಳೆಹಣ್ಣು ,ಚುಕ್ಕೆ ಇಂತಹ ಪೌಷ್ಟಿಕ ಆಹಾರಗಳನ್ನು ಒದಗಿಸಿ ಶಾಲೆಗೆ ಬರಬೇಕು ಎನ್ನುವ ಉದ್ದೇಶವಾಗಿದೆ ಎಂದರು.48 ಬಾರಿ ಆಯಾ ಒಂದು ಪದಾರ್ಥಗಳನ್ನು ಒದಗಿಸಲಾಗಿದೆ.ಶೌಚ್ಛಾಲಯದ ಕೊರತೆಯನ್ನು ಪಾಲಕರು ತಿಳಿಸಿದರು.
ಪೋಪಿಕ ಅಸಿಡ ಹಾಗೂ ಜಂತು ಮಾತ್ರೆಗಳ ವಿತರಣೆ ಕುರಿತು ತಾಲ್ಲೂಕಿನ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಯಾರು ಬಂದು ಯೋಜನೆ ಮೇಲ್ವಿಚಾರಣೆ ಮಾಡಿಲ್ಲ, ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಸರಬರಾಜು ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
Join The Telegram | Join The WhatsApp |