This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Feature Article

ಖಾನಾಪುರದ ಆಶಾಕಿರಣ ವಿಠ್ಠಲ ಹಲಗೇಕರ

Join The Telegram Join The WhatsApp

ವಿಠ್ಠಲ ಹಲಗೇಕರ ಖಾನಾಪುರ ತಾಲೂಕಿನ ಅತ್ಯಂತ ಜನಜನಿತ ವ್ಯಕ್ತಿ. ಅತ್ಯಂತ ಸರಳ ಸೌಮ್ಯತೆ ಹಾಗೂ ಜನಾನುರಾಗಿ ಆಗಿ ಗುರುತಿಸಿಕೊಂಡಿರುವ ಅವರ ಸರಳತೆ ಎಲ್ಲರೂ ಮೆಚ್ಚುವಂತದ್ದು. ಅವರು ಜನಪ್ರತಿನಿಧಿಗಾಗಿ ಸೇವೆ ಸಲ್ಲಿಸುವ ಯೋಗಾಯೋಗ ಆದಷ್ಟು ಬೇಗ ಕೂಡಿ ಬರಲಿ ಎನ್ನುವುದು ಖಾನಾಪುರ ತಾಲೂಕಿನ ಜನತೆಯ ಆಶಯವಾಗಿದೆ. ಖಾನಾಪುರ ಮಣ್ಣಿನ ಮಗ ವಿಠ್ಠಲ ಹಲಗೇಕರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ನಿಮಿತ್ತ ಈ ಲೇಖನ. 

ಖಾನಾಪುರ ತಾಲೂಕಿನ ಪುಟ್ಟ ಗ್ರಾಮ ತೋಪಿನಕಟ್ಟಿ. ಈ ಗ್ರಾಮದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ 1963ರ ಜನವರಿ 7ರಂದು ಸೋಮಣ್ಣ ಮತ್ತು ಮಲ್ಲವ್ವ ದಂಪತಿಯ ನಾಲ್ಕು ಮಕ್ಕಳ ಪೈಕಿ ಹಿರಿಯವರಾಗಿ ಜನಿಸಿದ ವಿಠ್ಠಲ ಸೋಮಣ್ಣ ಹಲಗೇಕರ ಸರಳತೆಯ ಸಾಕಾರಮೂರ್ತಿ. ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದ ಸರಳ ಸಜ್ಜನ ವ್ಯಕ್ತಿ. ಇಬ್ಬರು ಸಹೋದರರು, ಓರ್ವ ಸೋದರಿಯರ ಜೊತೆ ತುಂಬು ಕುಟುಂಬದಲ್ಲಿ ಬೆಳೆದ ವಿಠ್ಠಲ ಹಲಗೇಕರ ವಿದ್ಯಾರ್ಜನೆ ಹಾಗೂ ಜ್ಞಾನಾರ್ಜನೆಯಲ್ಲಿ ಸಾಕಷ್ಟು ಪ್ರತಿಭಾವಂತರಾಗಿದ್ದರು. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಛಲದಿಂದ ಅವರು ತಮ್ಮ ಸ್ವಂತ ಊರು ತೋಪಿನಕಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಗರ್ಲಗುಂಜಿಯಲ್ಲಿ ಪ್ರೌಢ ಶಿಕ್ಷಣವನ್ನು ಉತ್ತಮ ಅಂಕಗಳಿಂದ ಯಶಸ್ವಿಯಾಗಿ ಪೂರೈಸಿದರು. 10 ನೇ ತರಗತಿಯಲ್ಲಿ ಪ್ರಥಮ ಕ್ರಮಾಂಕದಲ್ಲಿ ಉತ್ತೀರ್ಣರಾದ ಬಳಿಕ ಬೆಳಗಾವಿಯ ವಿವಿಧ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಮತ್ತು ಬಿ ಎಸ್ ಸಿ ಪದವಿ ಪರೀಕ್ಷೆಗಳನ್ನು ಅತ್ಯಂತ ಕಷ್ಟಪಟ್ಟು ಓದಿದರು.

ಬಿ ಎಸ್ ಸಿ ಪದವಿ ಬಳಿಕ ಬಿಎಡ್ ಶಿಕ್ಷಣವನ್ನು ಪೂರೈಸಿ ತಮ್ಮ ಮನದಲ್ಲಿ ಅಡಗಿದ್ದ ಶಿಕ್ಷಕರಾಗುವ ಬಯಕೆಗೆ ಇಂಬು ತುಂಬಿದರು.

ಬಿ ಎಸ್ ಸಿ ಹಾಗೂ ಬಿಎಡ್ ಶಿಕ್ಷಣದ ಬಳಿಕ ತಮ್ಮೂರು ಪಕ್ಕದ ಗರ್ಲಗುಂಜಿ ಗ್ರಾಮದ ಮಾವುಲಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ವಿಠ್ಠಲ ಹಲಗೇಕರ ಅವರು 1986 ರಲ್ಲಿ ತೋಪಿನಕಟ್ಟಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಮೂಲಕ ಪ್ರತಿ ಸದಸ್ಯರಿಂದ ಎರಡು ರೂಪಾಯಿ ಸಾಪ್ತಾಹಿಕ ಫಂಡ್ ರೂಪದಲ್ಲಿ ಸಂಗ್ರಹಿಸುವ ಮೂಲಕ ವಾಣಿಜ್ಯ ಮತ್ತು ಸಹಕಾರ ಕ್ಷೇತ್ರದಲ್ಲಿ ಅಂಬೆಗಾಲು ಇಡಲು ಆರಂಭಿಸಿದರು. 1986ರಲ್ಲಿ ವಿಠ್ಠಲ ಹಲಗೇಕರ ಅವರಿಂದ ಸ್ಥಾಪನೆಯಾದ ಸಾಪ್ತಾಹಿಕ ಫಂಡ್ ಏಳು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಮುನ್ನಡೆಯಿತು. ಮೊದಲು ಚಾಲ್ತಿಯಲ್ಲಿದ್ದ ಸಾಪ್ತಾಹಿಕ ಫಂಡ್ ನ ಮುಂದುವರಿದ ಭಾಗವಾಗಿ 1993 ರಲ್ಲಿ ಕೇವಲ 30,000 ರೂ.ಬಂಡವಾಳದೊಂದಿಗೆ ತಮ್ಮ ಹತ್ತಾರು ಸಮಾನ ಮನಸ್ಕ ಸ್ನೇಹಿತರ ಜೊತೆ ಸೇರಿ ತೋಪಿನಕಟ್ಟಿ ಗ್ರಾಮದ ಗ್ರಾಮದೇವಿ ಶ್ರೀ ಮಹಾಲಕ್ಷ್ಮೀ ಹೆಸರಲ್ಲಿ ಆರ್ಥಿಕ ಸಂಸ್ಥೆಯನ್ನು ಅವರು ಪ್ರಾರಂಭಿಸಿದರು. ಅಂದು ಅವರು ಅಲ್ಪ ಬಂಡವಾಳದೊಂದಿಗೆ ಸ್ಥಾಪಿಸಿದ ಸಂಸ್ಥೆ ಇಂದು ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಮೂಲಕ ಹೆಮ್ಮೆರವಾಗಿ ಬೆಳೆದು ನಿಂತಿದೆ. ಕೃಷಿ, ವ್ಯಾಪಾರ ವಹಿವಾಟು, ಶಿಕ್ಷಣ ಹಾಗೂ ಸಹಕಾರ ಸಂಘದಲ್ಲಿ ಮಿಂಚುತ್ತಿರುವ ಈ ಸಂಸ್ಥೆ ಇತ್ತೀಚಿಗೆ ಲೈಲಾ ಶುಗರ್ ಸಕ್ಕರೆ ಕಾರ್ಖಾನೆಯನ್ನು ಸಹ ತನ್ನ ಸುಪರ್ದಿಗೆ ಪಡೆದುಕೊಂಡು ಈ ಭಾಗದ ರೈತರು ಹಾಗೂ ಸಾವಿರಾರು ನಿರುದ್ಯೋಗಗಳ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದೆ.

ರಾಜಕಾರಣದಲ್ಲಿ ಸಕ್ರಿಯ :

ವಿಠ್ಠಲ ಹಲಗೇಕರ ಅವರ ಹಿಂದೆ ಮಹಾಲಕ್ಷ್ಮೀ ಸಮೂಹ ಸಂಸ್ಥೆಯ ಇಡೀ ಬಳಗ, ಸಂಸ್ಥೆಯ ಅಭಿಮಾನಿಗಳು ಹಾಗೂ ಬೆಂಬಲಿಗರ ದೊಡ್ಡ ಸೈನ್ಯವೇ ಇದೆ. ಕಳೆದ ಆರು ವರ್ಷಗಳಿಂದ ತಾಲೂಕಿನ ರಾಜಕಾರಣದಲ್ಲಿ ಸಕ್ರಿಯವಾಗಿರುವ ಅವರು ಈ ಅವಧಿಯಲ್ಲಿ ಅಪಾರ ಜನಬೆಂಬಲ ಗಳಿಸಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನ ಸೇವೆ ಮಾಡುವ ಉದ್ದೇಶದಿಂದ ಅವರು 2013 ರ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 2018 ರ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಪ್ರತಿಸ್ಪರ್ಧಿ ವಿರುದ್ಧ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದು ಇತಿಹಾಸ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಬಹುದೊಡ್ಡ ಗುಂಪು ಹಲಗೇಕರ ಅವರನ್ನು ಖಾನಾಪುರ ತಾಲೂಕಿನ ಮುಂದಿನ ಶಾಸಕರನ್ನಾಗಿ ಆರಿಸಿ ತರಲು ಪ್ರಯತ್ನಿಸುತ್ತಿದೆ. ಪಕ್ಷದ ಬ್ಲಾಕ್ ಘಟಕದಿಂದ ಹಿಡಿದು ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗಿನ ಪಕ್ಷದ ಎಲ್ಲಾ ಮುಖಂಡರ ಜೊತೆ ನಿಕಟ ಸ್ನೇಹ ಸಂಪರ್ಕ ಹೊಂದಿರುವ ವಿಠ್ಠಲ ಹಲಗೇಕರ ಅವರು ಕ್ಷೇತ್ರದ ಪ್ರತಿಯೊಂದು ಆಗುಹೋಗುಗಳಲ್ಲಿ ಭಾಗವಹಿಸಿ ನೊಂದವರ ನೆರವಿಗೆ ಧಾವಿಸುವ ಗುಣ ಹೊಂದಿದ್ದಾರೆ. ಇದೇ ಗುಣದಿಂದಾಗಿ ಅವರು ಕ್ಷೇತ್ರದ ಜನರ ಬೆಂಬಲ ಮತ್ತು ಆಶೀರ್ವಾದ ಪಡೆದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಶೈಕ್ಷಣಿಕ ಸಹಕಾರ ಕ್ಷೇತ್ರದಲ್ಲಿ ಸಾಧನೆ :

ವಿಠ್ಠಲ ಹಲಗೇಕರ ಅವರು 30 ನೇ ವಯಸ್ಸಿನಲ್ಲಿ ಶಿಕ್ಷಕ ವೃತ್ತಿ ಜೊತೆಯಲ್ಲಿ ತಮ್ಮೂರಿನ ಮತ್ತು ನಿತ್ಯ ತಮ್ಮೊಂದಿಗೆ ಹತ್ತಿರದ ಒಡನಾಟ ಹೊಂದಿದ್ದ ಸ್ನೇಹಿತರ ಪಡೆಯ ನೆರವಿನಿಂದ ವಿವಿಧ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಸಹಕಾರ ಕ್ಷೇತ್ರದ ಸುದೀರ್ಘ ಪಯಣದಲ್ಲಿ ಬೆನ್ನೆಲುಬಾಗಿ ನಿಂತ ಅವರ ಸ್ನೇಹಿತರಾದ ಚಂಗಪ್ಪ ನೀಲಜಕರ, ಅಚ್ಯುತ ಪಾಟೀಲ, ಪುಂಡಲಿಕ ಗುರವ, ವಿಠ್ಠಲ ಕರಂಬಳಕರ, ಯಲ್ಲಪ್ಪ ತಿರವಿರಕರ, ನಾಗೇಶ ಜೋಗೋಜಿ, ಮಹಾದೇವ ಬಾಂದಿವಾಡಿಕರ ಹಾಗೂ ಇತರ ಪದಾಧಿಕಾರಿಗಳ ಕಾರ್ಯದಿಂದ ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಖಾನಾಪುರ ತಾಲೂಕಿನಲ್ಲಿ ಜನಮನ ಗಳಿಸಿದ್ದಾರೆ. ಬಿಜೆಪಿ ಮುಖಂಡರಾಗಿ ಇಡೀ ಬೆಳಗಾವಿ ಜಿಲ್ಲೆಗೆ ಚಿರಪರಿಚಿತರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಚಾಪನ್ನು ಅವರು ಮೂಡಿಸಿದ್ದಾರೆ ಖಾನಾಪುರ ಮಣ್ಣಿನ ಮಗ ವಿಠ್ಠಲ ಹಲಗೇಕರ ಅವರು.


Join The Telegram Join The WhatsApp
Admin
the authorAdmin

Leave a Reply