
ಕಾರ್ಕಳ: ಹಿರ್ಗಾನ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮಂಡಳಿಯ ಹುದ್ದೆಗೆ ಅಶೋಕ್ ನಾಯಕ್ ರಾಜೀನಾಮೆ ನೀಡಿದ್ದಾರೆ.
ರಾಜಾಪುರ ಸಾರಸ್ವತ ಸಮಾಜದ ಸ್ವಾಮೀಜಿಯವರ ಸೂಚನೆಯಂತೆ ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಶೋಕ್ ನಾಯಕ್ ಆಡಳಿತ ಮಂಡಳಿಯಲ್ಲಿ ಇದ್ದರೆ ತಾವು ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಇತ್ಯಾದಿ ಮುಂಬರುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವು ಭಕ್ತಾದಿಗಳ ಮುಂದೆ ಸ್ವಾಮೀಜಿ ಹೇಳಿಕೊಂಡ ಹಿನ್ನೆಲೆಯಲ್ಲಿ ಅಶೋಕ್ ನಾಯಕ್ ರಾಜೀನಾಮೆ ನೀಡುವುದಕ್ಕೆ ಆಡಳಿತ ಮಂಡಳಿಯಲ್ಲಿ ಒತ್ತಡಗಳು ಬಂದಿದ್ದವು ಎನ್ನಲಾಗಿದೆ.
ಇತ್ತೀಚಿಗೆ ದೇವಸ್ಥಾನದಲ್ಲಿ ನಡೆದ ಸಭೆ ಒಂದರಲ್ಲಿ ಭಕ್ತಾದಿಗಳು ಮನವಿ ನೀಡುತ್ತಿದ್ದ ವೇಳೆ ಅಶೋಕ್ ನಾಯಕ್ ಹಲ್ಲೆಗೆ ಮುಂದಾಗಿರುವ ವಿಡಿಯೋ ವೈರಲ್ ಆಗಿತ್ತು.
ಇದಾದ ಬಳಿಕ ಜಗದೀಶ್ ಎಂಬವರು ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.