ಪುತ್ತೂರು: ಅರಿಯಡ್ಕ ಗ್ರಾಮಕ್ಕೆ ಈ ಬಾರಿ ೮೦ ಲಕ್ಷ ರೂ ಅನುದಾನವನ್ನು ನೀಡಲಾಗಿದ್ದು ಎಲ್ಲಾ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾಮಂದಿರದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದಿಂದ ಸಿಗುವ ಅನುದಾನವನ್ನು ಯಾವುದೇ ರಾಜಕೀಯ ಮಾಡದೆ ಸಮಾನ ರೀತಿಯಲ್ಲಿ ಹಂಚುವ ಕೆಲಸ ಮಾಡಿದ್ದೇನೆ. ಕಳೆದ ಕೆಲವು ತಿಂಗಳ ಹಿಂದೆ ತೆಂಗಿನ ಕಾಯಿ ಒಡೆದಿದ್ದ ಎಲ್ಲಾ ರಸ್ತೆ ಕಾಮಗಾರಿಗಳು ಪ್ರಾರಂಭಗೊಂಡಿದ್ದು ಅರಿಯಡ್ಕ ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಂಡಿದೆ . ಉಳಿದ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಎರಡನೇ ಹಂತದ ಅನುದಾನವನ್ನು ಹಂಚುವ ಕಾರ್ಯ ಶೀಘ್ರದಲ್ಲೇ ಆಗಲಿದ್ದು ಗ್ರಾಮಸ್ಥರ ರಸ್ತೆ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಹೇಳಿದರು.
ಪೂರ್ಣಗೊಂಡ ರಸ್ತೆಗಳು:
ಕೌಡಿಚ್ಚಾರ್ ಶ್ರೀ ಕೃಷ್ಣಭಜನಾಮಂದಿರ ರಸ್ತೆ ೫ ಲಕ್ಷ, ಕೌಡಿಚ್ಚಾರ್ ಸಿಆರ್ ಸಿ ರಸ್ತೆ ೧೦ ಲಕ್ಷ, ಪಾಪೆಮಜಲು ಪಾದಲಾಡಿ ರಸ್ತೆ ೧೫ ಲಕ್ಷ, ಕೌಡಿಚ್ಚಾರ್ ಕುತ್ಯಾಡಿ ಮಾಯಿಲಕೊಚ್ಚಿ ರಸ್ತೆ ೧೫ ಲಕ್ಷ, ಪಟ್ಲಕಾನ ರಸ್ತೆ ೫ ಲಕ್ಷ, ಜಾರತ್ತಾರು ಪನೆಕ್ಕಲ ರಸ್ತೆ ೫ ಲಕ್ಷ, ಶೇಕಮಲೆ ಪಯಂದೂರು ರಸ್ತೆ ೧೫ ಲಕ್ಷ, ಪಾಪೆಜಾಲು ಪಯಂದೂರು ರಸ್ತೆ ೧೦ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ.ಕಾಮಗಾರಿಗೆ ಇನ್ನೂ ಅನುದಾನ ಬರುತ್ತದೆ: ಇಕ್ಬಾಲ್ ಹುಸೇನ್
ಅರಿಯಡ್ಕ ಗ್ರಾಮಕ್ಕೆ ಶಾಸಕರು ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಎಷ್ಟೋ ವರ್ಷಗಳ ರಸ್ತೆ ಬೇಡಿಕೆ ಈಬಾರಿ ಈಡೇರಿದೆ. ಕಾಮಗಾರಿಯೂ ಗುಣಮಟ್ಟದಲ್ಲಿ ನಡೆದಿದೆ. ಇನ್ನಷ್ಟು ಬೇಡಿಕೆಗಳು ಬಾಕಿ ಇದೆ, ಹಂತ ಹಂತವಾಗಿ ಶಾಸಕರ ಮೂಲಕ ಗ್ರಾಮಕ್ಕೆ ಅನುದಾನ ಹರಿದುಬರಲಿದೆ. ಈ ಬಾರಿ ಅಭಿವೃದ್ದಿಯಾಗದ ರಸ್ತೆಗಳು ಮುಂದಿನ ಬಾರಿ ಅಭಿವೃದ್ದಿಯಾಗಲಿದೆ, ಇದರಲ್ಲಿ ಯಾವುದೇ ಅನುಮಾನವೇ ಬೇಡ-ಇಕ್ಬಾಲ್ ಹುಸೇನ್ , ವಲಯ ಕಾಂಗ್ರೆಸ್ ಅಧ್ಯಕ್ಷರು
ಕಾರ್ಯಕ್ರಮದಲ್ಲಿ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಪುತ್ತೂರು ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ,ಅರಿಯಡ್ಕ ಗ್ರಾ.ಪಂ ಸದಸ್ಯರಾದ ವಿನೀತ, ಹರೀಶ್ ರೈ ಜಾರತ್ತಾರು, ಕೌಡಿಚ್ಚಾರ್ ಭಜನಾಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ, ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಅಕಾಯಿ , ಕುಶಾಲಪ್ಪ ಗೌಡ ಮಡ್ಯಂಗಳ, ವಿಠಲ್ ನಾಯ್ಕ್, ಬಶೀರ್ ಕೌಡಿಚ್ಚಾರ್, ರಾಜೇಶ್ ಆರ್ ಪಿ, ಜನಾರ್ಧನ ಬಲ್ಲಿಕಾನ, ಪ್ರವೀಣ್ ಕರ್ಕೆರಾ ಮಡ್ಯಂಗಳ, ಚಂದ್ರ ಕುತ್ಯಾಡಿ, ಪದ್ಮನಾಭ ಆಚಾರ್ಯ,ಗಣೇಶ್ ಕೌಡಿಚ್ಚಾರ್, ಅರ್ಚಕ ಕರುಣಾಕರ್, ಅಶೋಕ್ ರೈ ದೇರ್ಲ, ಶಿವಪ್ಪ ಕುಲಾಲ್ ಪಾದೆಲಡಿ, ಸತ್ಯಂದ್ರನ್ ಸಿಆರ್‌ಸಿ ಕೌಡಿಚ್ಚಾರ್, ಗೋಪಾಲ ಕೃಷ್ಣ ಮಣಿಯಾಣಿ, ಮೊದಲಾದವರು ಉಪಸ್ಥಿತರಿದ್ದರು.