ಪುತ್ತೂರು: ನನಗೆ ಬರುವ ಅನುದಾನದಲ್ಲಿ ಕ್ಷೇತ್ರದ ಎಲ್ಲಾ ವಲಯಗಳಿಗೂ ಸಮಾನವಾಗಿ ಹಂಚುತ್ತಿದ್ದೇನೆ ಈ ನಡುವೆಯೂ ಕೆಲವೊಂದು ಹೆಚ್ಚುವರಿಅನುದಾನವನ್ನು ನರಿಮೊಗರು ಗ್ರಾಮಕ್ಕೆ ನೀಡಿದ್ದೇನೆ ,ನರಿಮೊಗರು ಗ್ರಾಮದಲ್ಲಿ ಹೆಚ್ಚುಮತಗಳು ಲಭ್ಯವಾಗಿರುವ ಕಾರಣನನ್ನ ಋಣವನ್ನು ತೀರಿಸುವ ಕೆಲಸ ಮಾಡಿದ್ದೇನೆ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನ ನೀಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಅವರು ನರಿಮೊಗರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು. ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳು ನಡೆಯುತ್ತದೆ ಎಂದು ಹೇಳಿದರು.ವಲಯ ಮತ್ತು ಬೂತ್ ಅಧ್ಯಕ್ಷರ ನಕ್ಕೆ ಬಾರದೆ ಯಾವುದೇ ಅನುದಾನವನ್ನು ಇಡುತ್ತಿಲ್ಲ, ಅಕ್ರಮಸಕ್ರಮ ಕಡತ ವಿಲೇವಾರಿಮಾಡುವಾಗಲೂ ವಲಯ,ಬೂತ್ ಅಧ್ಯಕ್ಷರಲ್ಲಿ ಕೇಳಿಯೇ ಮಂಜೂರು ಮಾಡುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಈಗ ಹೆಚ್ಚು ಗೌರವನೀಡುವ ಕೆಲಸವನ್ನುಪಕ್ಷದ ವತಿಯಿಂದ ನಡೆಯುತ್ತಿದೆ. ಕಾರ್ಯಕರ್ತರಮಾತಿಗೆ ಪಕ್ಷದಲ್ಲಿ ಗೌರವ ಕೊಡಬೇಕು ,ಕಾರ್ಕರ್ತರೇ ಪಕ್ಷದ ಜೀವಾಳ ಎಂದು ಶಾಸಕರು ಹೇಳಿದರು.
ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ. ಈ ಯೋಜನೆಯ ಬಗ್ಗೆ ಕಾರ್ಯಕರ್ತರುಪ್ರತೀಮನೆ ಮನೆಗೆ ತಿಳಿಸಬೇಕು. ಜನ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದು ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾದ ಅಗತ್ಯತೆ ಇದೆ. ಬಿಜೆಪಿಶಾಸಕರು ಇಲ್ಲಿ ಇದ್ದಾಗ ಜನರ ಕೆಲಸಗಳು ಆಗುತ್ತಿರಲಿಲ್ಲ.ಅಕ್ರಮಸಕ್ರಮದಲ್ಲಿಬೃಷ್ಟಾಚಾರ ನಡೆಯುತ್ತಿತ್ತು ಈಗ ಅದೆಲ್ಲವೂ ನಿಂತಿದೆ. ಪಕ್ಷ ಬೇದವಿಲ್ಲದೆ ಶಾಸಕನೆಂಬ ನೆಲೆಯಲ್ಲಿ ಎಲ್ಲರ ಕೆಲಸವನ್ನುಮಾಡುತ್ತಿದ್ದೇನೆ.ಪಕ್ಷಾ ತೀತವಾಗಿ ಕಾಂಗ್ರೆಸ್ ಕಾರ್ಯಕರ್ತರು ಬಡವರ ಸೇವೆ ಮಾಡುವ ಮೂಲಕ ಪಕ್ಷ ಕಟ್ಟಬೇಕು ಎಂದು ಶಾಸಕರು ಹೇಳಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ನರಿಮೊಗರು ಕಾಂಗ್ರೆಸ್ ಭದ್ರ ಕೋಟೆಯಾಗಿ ಮತ್ತೆ ಮಿಂಚಬೇಕಿದೆ. ಇಲ್ಲಿ ಕಾರ್ಯಕರ್ತರ ಕೊರತೆ ಇಲ್ಲ. ಶಾಸಕರು ಹೆಚ್ಚುಅನುದಾನವನ್ನು ಈಗಾಗಲೇ ಈ ಗ್ರಾಮಕ್ಕೆ ನೀಡಿದ್ದಾರೆ. ರಸ್ತೆಗಳ ಅಭಿವೃದ್ದಿಗಳುಮುಂದಿನದಿನಗಳಲ್ಲಿ ನಡೆಯಲಿದೆ. ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ ಜನರನ್ನು ಕಾಂಗ್ರೆಸ್‌ಮೇಲೆ ಹೆಚ್ಚು ವಿಶ್ವಾಸ ಇರಿಸುವಂತೆ ಮಾಡಿದೆ ಇದು ಮತವಾಗಿ ಪರಿವರ್ತನೆಯಾಗಲಿದೆ ದು ಹೇಳಿದರು.
ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ನರಿಮೊಗರುಮಾತನಾಡಿ ನರಿಮೊಗರು ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಮಾಜಿ ಶಾಸಕರುಅವರಿಗೆ ಇಷ್ಟವಾದ ಕಡೆ ಅನುದಾನ ಇಟ್ಟಿದ್ದರು, ಜನರಿಗೆ ಬೇಕಾದಕಡೆ ಅನುದಾನ ಇಟ್ಟಿದ್ದಾರೆ . ನಾವು ಆ ರೀತಿ ಮಾಡುವುದು ಬೇಡ ಜನರಿಗೆ ಅಗತ್ಯ ಇರುವಲ್ಲಿ ರಸ್ತೆಗಳ ಅಭಿವೃದ್ದಿ ನಡೆಯಲಿ ಎಂದು ಮನವಿಮಾಡಿದರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ,ವಿಶಾಲಾಕ್ಷಬನ್ನೂರು,ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು. ಹೊನ್ನಪ್ಪ ಪೂಜಾರಿಕೈಂದಾಡಿ ಸ್ವಾಗತಿಸಿದರು. ರವೀಂದ್ರ ನೆಕ್ಕಿಲು ಕಾರ್ಯಕ್ರಮನಿರೂಪಿಸಿದರು.