ಪುತ್ತೂರು: ನಮ್ಮ‌ಜಿಲ್ಲೆಯಲ್ಲಿ ಶಿಕ್ಷಣ ಕೇಂದ್ರಗಳು ಸಾಕಷ್ಟು‌ಪ್ರಮಾಣದಲ್ಲಿದೆ ಅದೇ ರೀತಿ ಇಲ್ಲಿ ಉದ್ಯಮಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೆ ಮಾತ್ರ ಶಿಕ್ಷಣ ಪಡೆದವರಿಗೆ ಉದ್ಯೋಗ ಹೊಂದಲು ಸಾಧ್ಯ ಈ ನಿಟ್ಟಿನಲ್ಲಿ ಉದ್ಯಮಗಳ ಪ್ರಾರಂಭದ ಜೊತೆ‌ ಮಂಗಳೂರನ್ನು ಐ ಟಿ ಸಿಟಿ ಮಾಡಬೇಕಾದ ಅಗತ್ಯವಿದ್ದು ಈ ಕೆಲಸವನ್ನು ಮುಂದಿನ‌ದಿನಗಳಲ್ಲಿ ಖಂಡಿತವಾಗಿಯೂ ಮಾಡುವುದಾಗಿ ಶಾಸಕ ಅಶೋಕ್ ರೈ ಅವರು ಹೇಳಿದರು.
ಅವರು ಒಳಮೊಗ್ರು ಗ್ರಾಮದ ಅಜ್ಜಿಕ್ಕಲ್ ಏಕತ್ತಡ್ಕ ಉ ಹಿ ಪ್ರಾ ಶಾಲೆಯಲ್ಲಿ ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ನಡೆದ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತೀಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಟ್ಯಾಲೆಂಟನ್ನು ಅರಿತು ಅದನ್ನು ತನ್ನ ಕಲಿಕೆಗೆ‌ ಬಳಸಿಕೊಳ್ಳಬೇಕು, ನೀವು ಪ್ರತಿಯೊಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಬೇಕು. ಕೇವಲ ಕಲಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ.‌ಕಲಿತು ಉದ್ಯೋಗವನ್ನು ಪಡೆಯಬೇಕು ಎಂಬ ಚಿಂತನೆ ನಿಮ್ಮಲ್ಲಿರಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆಯಲ್ಲಿ ನಿರತರಾಗಬೇಕು ಎಂದು ಹೇಳಿದರು.

ಇಚ್ಚಾಶಕ್ತಿಯುಳ್ಳವರಾಗಿ:
ವಿದ್ಯಾರ್ಥಿಗಳು ಕಲಿಕೆಯಲ್ಲಿ ಇಚ್ಚಾಶಕ್ತಿ ಇರುವ ರೀತಿಯಲ್ಲೇ ಸಮಾಜ ಸೇವೆ ಹಾಗೂ ವೃತ್ತಿ ಪಡೆದುಕೊಳ್ಳುವಲ್ಲಿ ಸದಾ ಆಸಕ್ತಿ ಇರುವವರಾಗಬೇಕು. ತಾನು ಸಮಾಜದಲ್ಲಿ‌ಸ್ವಂತ ಶಕ್ತಿಯಿಂದ ನಿಲ್ಲಬೇಕು ಎಂಬ‌ಮನೋಭಾವ ಪ್ರತೀಯೊಬ್ಬರಲ್ಲೂ ಇರಬೇಕು ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕರು ಹೇಳಿದರು.

ಊಟ ವಾಗ್ದಾನ ಮಾಡಿದ ಶಾಸಕರು
ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಕ್ಯಾಂಪ್ ನ ವಿದ್ಯಾರ್ಥಿಗಳಿಗೆ ಒಂದು ಹೊತ್ತಿನ ಮಾಂಸಾಹಾರ ಮತ್ತು ಸಸ್ಯಾಹಾರದ ಭರ್ಜರಿ ಊಟ ಕೊಡಿಸುವುದಾಗಿ ಶಾಸಕರು ವಾಗ್ದಾನ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಗೋಪಾಲಕೃಷ್ಣ ಕೆ, ಮಹಿಳಾ ಪ್ರಥಮ‌ದರ್ಜೆ ಕಾಲೇಜು ಕಾರ್ಯಾಧ್ಯಕ್ಷ ಝೇವಿಯರ್ ಡಿಸೋಜಾ,ಪ್ರಗತಿ ಪರ ಕೃಷಿಕರಾಸ ಸುಜಾತಾ ಪುಷ್ಪರಾಜ ಶೆಟ್ಟಿ ಯಡ್ಕತ್ತೋಡಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇದರ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚನಿಯಪ್ಪ ನಾಯ್ಕ, ಏಕತ್ತಡ್ಕ ಶಾಲಾ ಪ್ರಭಾರ ಮುಖ್ಯ ಗುರು ಚಿತ್ರಾ ರೈ ಎಚ್, ಏಕತ್ತಡ್ಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮೋಹನ ನಾಯ್ಕ, ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.