ಪುತ್ತೂರು: ಬೆನ್ನುಹುರಿ ಸಂಬಂದಿತ ಕಾಯಿಲೆಯಿಂದ ಬಳಲುತ್ತಿರುವ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಉಮ್ಮರ್ ಎಂಬವರ ಪುತ್ರಿ ವಿದ್ಯಾರ್ಥಿನಿ ಮಹ್ರೂಫಾಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ, ೧.೫೦ ಲಕ್ಷ ಮಂಜೂರಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಬೆನ್ನುಹುರಿ ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದ ಮಹ್ರುಫಾ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ ೪.೫೦ ಲಕ್ಷ ಆಸ್ಪತ್ರೆಯ ಬಿಲ್ ಆಗಿರುತ್ತದೆ. ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರಾದ ಅಶೋಕ್ ರೈ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಚಿಕಿತ್ಸೆಗೆ ದಾನಿಗಳ ಮೂಲಕ ಹಣ ಸಂಗ್ರಹ ಮಾಡಲಾಗಿತ್ತು. ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ನೆರವನ್ನು ಘೋಷಿಸಿದ್ದಾರೆ.

 


ಗಟ್ಟಮನೆ ನಿವಾಸಿ ಉಮ್ಮರ್ ಎಂಬವರ ಪುತ್ರಿ ಬೆನ್ನುಹುರಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಈಕೆಯ ಚಿಕಿತ್ಸೆಗೆ ದಾನಿಗಳು ಕೂಡಾ ನೆರವು ನೀಡಿದ್ದರು. ಈಕೆಗೆ ಈಗಲೂ ಚಿಕಿತ್ಸೆ ಮುಂದುವರೆದಿದ್ದು ವಿದ್ಯಾರ್ಥಿನಿ ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ. ಸರಕಾರದಿಂದ ೧.೫ ಲಕ್ಷ ನೆರವು ಘೋಷಿಸಲಾಗಿದೆ. ಬಡ ಕುಟುಂಬಕ್ಕೆ ಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ-ಅಶೋಕ್ ರೈ ಶಾಸಕರು