ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯಲಿರುವ ಶಾಸಕ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ “ಅಶೋಕ ಜನ – ಮನ” 2024, ದೀಪಾವಳಿ ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆ ಕಾರ್ಯಕ್ರಮ ನವೆಂಬರ್ 2 ರಂದು ಕೊಂಬೆಟ್ಟು ವಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಮಹಿಷಮರ್ಧಿನಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನವನ್ನೂ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ, ಮುರಳೀಧರ ರೈ, ನಿರಂಜನ್ ರೈ, ಶಿವಪ್ರಸಾದ್ ಶೆಟ್ಟಿ, ದೇವಳದ ವ್ಯವಸ್ಥಾಪಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಎಲ್ಲರೂ ಭಾಗವಹಿಸಿ :
ನ.2 ರಂದು ನಡೆಯುವ ಪುತ್ತೂರು ಶಾಸಕ ಅಶೋಕ್ ರೈ ಅವರ ಅಶೋಕ ಜನ-ಮನ 2024 ಈ ಕಾರ್ಯಕ್ರಮದ ಗ್ರಾಮ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಟ್ರಸ್ಟ್ ತಂಡ ತೆರಳಿ ಜನರನ್ನು ಆಹ್ವಾನಿಸಲಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಬಹಳ ವಿಜೃಂಬಣೆಯಿಂದ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪೂರ್ವ ಸಿದ್ದತಾ ಕಾರ್ಯ ಆರಂಭಗೊಂಡಿದೆ. ತಾಲೂಕಿನ ಪ್ರತೀಯೊಬ್ಬರೂ ಕಾರ್ಯಕ್ರಮದಲ್ಲಿಭಾಗವಹಿಸಿ ಆಶೀರ್ವದಿಸಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ.
ಸುದೇಶ್ ಶೆಟ್ಟಿ
ಕಾರ್ಯಾಧ್ಯಕ್ಷರು ರೈ ಎಸ್ಟೇಟ್ಸ್ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್.