ದೆಹಲಿ :
ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಕೋವಿಶೀಲ್ಡ್ ಲಸಿಕೆ ತಯಾರಕಾ ಕಂಪನಿ ಆಸ್ಟ್ರಾಝನೆಕಾ ಇದೀಗ ಪ್ರಪಂಚದಾದ್ಯಂತ ಔಷಧ ಮಾರುಕಟ್ಟೆಗಳಿಂದ ಲಸಿಕೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.

ಸಾಂಕ್ರಾಮಿಕ ರೋಗಗಳ ಬಳಿಕ ಬೇಡಿಕೆಯು ಕಡಿಮೆಯಾಗಿದೆ. ಇದಲ್ಲದೆ ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ನಿಲ್ಲಿಸಲಾಗಿದೆ. ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ. ಲಸಿಕೆಯನ್ನು ಇನ್ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ಅಸ್ಟ್ರಾಜೆನೆಕಾ ಸ್ವೀಡಿಶ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಕೇಂಬ್ರಿಡ್ಜ್ ಬಯೋಮೆಡಿಕಲ್‌ ಕ್ಯಾಂಪಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ತನ್ನ ಕೋವಿಡ್ ಲಸಿಕೆಗಳನ್ನು ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಂದ ಹಿಂಪಡೆಯುತ್ತಿದೆ. ಹೆಚ್ಚುವರಿಯಾಗಿ ಇದು ಯುರೋಪ್‌ನಲ್ಲಿ ಮಾರ್ಕೆಟಿಂಗ್ ಅನುಮೋದನೆಯನ್ನು ಹಿಂಪಡೆಯಲು ಯೋಜಿಸಿದೆ.