Join The Telegram | Join The WhatsApp |
ಬೆಂಗಳೂರು :
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ.
ಕೋಲಾರದಿಂದಲೇ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಇಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಇದುವರೆಗಿನ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.
ಕೋಲಾರದಲ್ಲಿಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ನಿಮ್ಮ ಪ್ರೀತಿಯ ಅಭಿಮಾನ ನೋಡಿದಾಗ ನಾನು ಇಲ್ಲಿಂದಲೇ
ಸ್ಪರ್ಧೆಗೆ ಸಿದ್ದನಾಗಿದ್ದೇನೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ಪ್ರಕಟಿಸಿದರು.
ಕೆಲ ದಿನಗಳ ಹಿಂದಷ್ಟೇ ಕೋಲಾರಕ್ಕೆ ಬಂದು ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಹೋಗಿದ್ದೆ. ಎಲ್ಲರೂ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ನನಗೆ ಕ್ಷೇತ್ರವಿಲ್ಲ ಎಂದು ಕೆಲವರು
ಅಪ ಪ್ರಚಾರ ಮಾಡುತ್ತಿದ್ದಾರೆ. ನನ್ನ ಹಳೆ ಕ್ಷೇತ್ರ ಬಾದಾಮಿ ಜನರು ದೂರ ಎನ್ನುವುದಾದರೂ ಒಂದು ಹೆಲಿಕಾಪ್ಟರ್ ನ್ನೇ ಕೊಡುವುದಾಗಿ ಹೇಳಿದ್ದಾರೆ. ಕೊನೆಗೂ ನಾನು ಕೋಲಾರದಿಂದ ಕಣಕ್ಕಿಳಿಯುವುದು ಅಂತಿಮ ಎಂದು ಇದೀಗ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ
Join The Telegram | Join The WhatsApp |