ಮೈಲಾರ (ವಿಜಯನಗರ ಜಿಲ್ಲೆ):
ಸಂಪಾಯಿತಲೇ ಪರಾಕ್…..! ಎಂದು ಕಾರ್ಣಿಕ ನುಡಿಯುವ ಮೂಲಕ ಮೈಲಾರ ಕಾರ್ಣಿಕೋತ್ಸವ ಸೋಮವಾರ ಸಂಜೆ ಸಂಪನ್ನಗೊಂಡಿದೆ.

7 ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನು ಏರಿದ ಗೊರವಯ್ಯ ರಾಮಣ್ಣ ಅವರು ಈ ನುಡಿ ಆಡಿದರು. ಇದಕ್ಕೆ ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ನಾಡಿಗೆ ಈ ವರ್ಷ ಉತ್ತಮ ಮಳೆ, ಬೆಳೆ ಆಗಲಿದೆ. ನಾಡು ಸುಭಿಕ್ಷವಾಗಲಿದೆ ಎಂದು ಗೊರವಯ್ಯನ ಭವಿಷ್ಯ ವಾಣಿಯನ್ನು ವಿಶ್ಲೇಷಿಸಿರುವುದು ಗಮನಸೆಳೆಯಿತು.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯನ್ನು ಜಾತ್ರೆಯಲ್ಲಿ ನಡೆಯುವ ಕಾರ್ಮಿಕವನ್ನು ನಾಡಿನ ಮುನ್ನುಡಿ ಎಂದೇ ಪರಿಗಣಿಸಲಾಗುತ್ತದೆ.
ಈ ಸಾಲಿನ ಜಾತ್ರೆಯ ವೇಳೆ ಮೈಲಾರಲಿಂಗೇಶ್ವರ ದೇವರ ಗೊರವಯ್ಯ ಈ ವರ್ಷದ ಕಾರ್ಣಿಕವನ್ನು ನುಡಿದರು. ಈ ಮೂಲಕ ಬರಗಾಲದಿಂದ ತತ್ತರಿಸಿದ್ದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. 18 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಂದು ಹೇಳಿದೊಡನೆ ಎಲ್ಲರೂ ಶಾಂತವಾಗಿದ್ದರು. ಮರುಕ್ಷಣ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದು ಬಿದ್ದಿದ್ದಾರೆ. ಕಾರ್ಣಿಕವನ್ನು ನಾಡಿನ ಒಂದು ವರ್ಷದ ಭವಿಷ್ಯವಾಣಿ ಎಂದೇ ಪರಿಗಣಿಸಲಾಗುತ್ತದೆ.
ಸಂಪಾಯಿತಲೇ ಕಾರ್ಣಿಕವನ್ನು ದೇವಸ್ಥಾನದ ಆಡಳಿತ ಮಂಡಳಿ ವಿಶ್ಲೇಷಿಸಿದ್ದು ಈ ವರ್ಷ ಮಳೆ ಬೆಳೆ ಸಮೃದ್ಧವಾಗಲಿದೆ ಎಂದು ವಿಶ್ಲೇಷಿಸಿದೆ. ಬರಗಾಲದಿಂದ ರೈತರು ಕಂಗೆಟ್ಟಿದ್ದು ಈ ವರ್ಷ ರೈತ ಸಮುದಾಯ ತುಸು ಸಂತಸ ಕಾಣಲಿದೆ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸಂದೇಶ ನೀಡಲಾಗಿದೆ. ಆದರೆ ರಾಜಕೀಯದ ಬಗ್ಗೆ ಯಾವ ವಿಶ್ಲೇಷಣೆಯನ್ನು ಮಾಡಿಲ್ಲ.