Join The Telegram | Join The WhatsApp |
ಬೆಂಗಳೂರು-
ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್ ಬೆಳೆ ಬೆಳೆದಿದೆ. ಹೊಸ ವರ್ಷಕ್ಕೆ ಲಕ್ಷ ಲಕ್ಷ ಲೀಟರ್ ಮದ್ಯವನ್ನ ಪಾನಪ್ರಿಯರು ಹೊಟ್ಟೆಗಿಳಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ಐದು ದಿನದಲ್ಲಿ ಅಬಕಾರಿ ಇಲಾಖೆ ಭರ್ಜರಿ ಮದ್ಯ ಮಾರಾಟ ಮಾಡಲಾಗಿದೆ.
ರಾಜ್ಯದಲ್ಲಿ 3,921 ವೈನ್ಶಾಪ್ (ಸಿಎಲ್2), 3622 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1,729 ಹೋಟೆಲ್ ಮತ್ತು ವಸತಿಗೃಹ (ಸಿಎಲ್7) ಹಾಗೂ 265 ಕ್ಲಬ್ ಸೇರಿ ಒಟ್ಟು 12,113 ಮದ್ಯದಂಗಡಿಗಳಿವೆ.
ಡಿಸೆಂಬರ್ 23ರಿಂದ 31ರವರೆಗೆ ಐಎಂಎಲ್ ಮದ್ಯ 20.66 ಲಕ್ಷ ಲೀಟರ್ ಮಾರಾಟವಾಗಿದ್ರೆ, 15.04 ಲಕ್ಷ ಲೀಟರ್ ಬಿಯರ್ ಮಾರಾಟಗೊಂಡಿದೆ. ಇನ್ನು ನಿನ್ನೆ ಅಂದ್ರೆ ಡಿಸೆಂಬರ್ 31ರಂದು ಒಂದೇ ದಿನ 181 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ಅಬಕಾರಿ ಇಲಾಖೆಗೆ 657 ಕೋಟಿ ಆದಾಯ ಹರಿದು ಬಂದಿದೆ.
Join The Telegram | Join The WhatsApp |