ಬೆಳಗಾವಿ : ನಗರದ ಆರ್‌ಪಿಡಿ ವೃತ್ತದ ಬಳಿ ಹತ್ತಕ್ಕೂ ಹೆಚ್ಚು ಯುವಕರ ಗುಂಪು ಹೊಡೆದಾಟ ನಡೆಸಿದೆ. ಅನ್ಯಕೋಮಿನ ಇಬ್ಬರು ಸಹೋದರರು ಫೋನ್ ಮಾಡಿ ಇನ್ನು ಕೆಲವರನ್ನು ಕರೆಸಿ ಹಲ್ಲೆ ಮಾಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಖಾಸಬಾಗ ಪಾಟೀಲ ಗಲ್ಲಿಯ ನೂರ್ ಬಸೀರ್ ಅಹಮದ್ ಹೊಸಪೇಟ(35) ಮತ್ತು ಮಂಜೂರ ಹೊಸಪೇಟ ಅವರ ಮೇಲೆ ದಾಳಿ ನಡೆಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಗೌಂಡಿ ಕೆಲಸ ಮಾಡುತ್ತಿದ್ದ ಯುವಕರ ನಡುವೆ ಸಣ್ಣಪುಟ್ಟ ಜಗಳದಿಂದ ಹಲ್ಲೆಯಾಗಿದ್ದು ಎರಡು ಗುಂಪಿನ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ಯುವಕರನ್ನು ಬಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂದು ಡಿಸಿಪಿ ರೋಹನ ಜಗದೀಶ್ ತಿಳಿಸಿದ್ದಾರೆ.