ಬೆಳಗಾವಿ: ಇಲ್ಲಿನ ಗೂಡ್ಸ್‌ಶೆಡ್ ರಸ್ತೆಯ ಖಾಸಗಿ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಮಂಗಳವಾರ ನಸುಕಿನ ಜಾವ ಕಳ್ಳತನಕ್ಕೆ ಯತ್ನ ಆರೋಪದಡಿ ಒಬ್ಬನನ್ನು ಖಡೇಬಜಾ‌ರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಸ್ತ್ರಿ ನಗರದ ನಿವಾಸಿ ಸುನೀಲ ಕೋಲೆ ಬಂಧಿತ.

ವಿಪರೀತ ಮದ್ಯ ಸೇವಿಸುತ್ತಿದ್ದ ಈತ, ಎಟಿಎಂ ಕೇಂದ್ರದಲ್ಲಿ ಹಣ ತೆಗೆಯಲು ಯತ್ನಿಸಿದ್ದಾನೆ. ಆದರೆ, ಹಣ ಬಾರದಿದ್ದಾಗ ಯಂತ್ರ ತಳ್ಳಾಡಿದ್ದಾನೆ. ಈತನನ್ನು ಬಂಧಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.