ಬೆಳಗಾವಿ : ಬಿಲ್ಲವರ ಅಸೋಸಿಯೇಶನ್ ನ ಮಹಿಳಾ ಮಂಡಳದ ವತಿಯಿಂದ ಶಿವಗಿರಿ ಸೊಸೈಟಿಯಲ್ಲಿ ಆಟಿದ ಅಟ್ಟಿಲ (ಆಷಾಢದ ಅಡುಗೆ) ಕಾರ್ಯಕ್ರಮವನ್ನು ರವಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಲವಾರು ಬಗೆಯ ತಿನಿಸುಗಳನ್ನು ತಯಾರಿಸಿ ತಂದಿದ್ದರು.

ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ತಯಾರಿಸುತ್ತಿದ್ದ ವಿಶೇಷ ತಿನಿಸುಗಳು ಎಲ್ಲರ ಗಮನ ಸೆಳೆದವು . ಬಿಲ್ಲವ ಸಂಘದ ಸದಸ್ಯರು, ಮಹಿಳಾ ಮಂಡಳದ ಸದಸ್ಯರು, ಯುವ ಘಟಕದ ಸದಸ್ಯರು ಮತ್ತು ಸೊಸೈಟಿಯ ನಿರ್ದೇಶಕ ಮಂಡಳಿಯವರು ಹಾಜರಿದ್ದರು.