ಹೆಬ್ರಿ: 16 – 2 – 2025 ರಂದು ಶಿವಪುರದಲ್ಲಿ ನಡೆಯುವ ಹೆಬ್ರಿ ತಾಲೂಕು ಐದನೆಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕಿ ಪಿ. ಜಯಲಕ್ಷ್ಮಿ ಅಭಯ ಕುಮಾರ್ (ಅಭಯ ಲಕ್ಷ್ಮಿ)ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ವಿಷಯವನ್ನು ದಿನಾಂಕ 5-1-2025ರಂದು ಶಿವಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಪ್ರಕಟಿಸಲಾಯಿತು. ಈ ಸಂದರ್ಭದಲ್ಲಿ ಹೆಬ್ರಿ ತಾಲೂಕು ಕ.ಸಾ.ಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಸಂಚಾಲಕ ರಮಾನಂದ ಶೆಟ್ಟಿ, ಗೌರವಾಧ್ಯಕ್ಷ ಶಂಕರನಾರಾಯಣ ಕೊಡಂಚ,ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯೆ ಗುಲಾಬಿ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿಗಳಾದ ಡಾ. ಪ್ರವೀಣ ಕುಮಾರ್’, ಮಂಜುನಾಥ ಕೆ ಶಿವಪುರ ಮತ್ತು ಕ.ಸಾ.ಪ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಭಯ ಲಕ್ಷ್ಮಿ ಅವರ ಪರಿಚಯ:
ಪಿ ಜಯಲಕ್ಷ್ಮಿ ಅಭಯ್ ಕುಮಾರ್
(ಕಾವ್ಯನಾಮ: ಅಭಯ ಲಕ್ಷ್ಮಿ).
ಶ್ರೀಮತಿ ಪಿ ಜಯಲಕ್ಷ್ಮಿ ಅಭಯ್ ಕುಮಾರ್ (ಕಾವ್ಯನಾಮ: ಅಭಯ ಲಕ್ಷ್ಮಿ)ನಾಡಿನ ಖ್ಯಾತ ಸಾಹಿತಿ. ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಂ ಡಿ ಅಧಿಕಾರಿ ಮತ್ತು ಕಮಲಾವತಿ ಅಧಿಕಾರಿ ಅವರ ದಂಪತಿಯ ಪುತ್ರಿಯಾಗಿ ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ ಜನಿಸಿದರು. ಕನ್ನಡ ಎಂ.ಎ ಪದವಿ ಮತ್ತು ಜೈನಾಲಜಿಯಲ್ಲಿ ಡಿಪ್ಲೋಮವನ್ನು ಪಡೆದವರು. ದಿ ನ್ಯೂ ಕೇಂಬ್ರಿಜ್ ಪದವಿ ಪೂರ್ವ ಕಾಲೇಜು, ವಿಜಯನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಉದ್ಯೋಗವನ್ನು ಮಾಡಿದವರು.ಇವರು ಬರೆದಿರುವ ಕೃತಿಗಳು
ಹೇಗಿರಲಿ ನಾನು (ಕವನ ಸಂಕಲನ ), ‘ ಸ್ವಾತಂತ್ರ್ಯ ಯೋಧ ಶ್ರೀ ಎಂಡಿ ಅಧಿಕಾರಿ (ಜೀವನ ಚರಿತ್ರೆ ), ಅಭಿನವ ಅತ್ತಿಮಬ್ಬೆ (ಜೀವನ ಸಾಧನೆ), ಗಂಧಶಾಲಿ (ಪ್ರಬಂಧ ಸಂಕಲನ ) ಪುಣ್ಯವನಿತೆ ಮೈನಾ ಸುಂದರಿ (ರಂಗ ನಾಟಕ) ಪ್ರೇಮ ಭಟ್ (ಬದುಕು ಬರಹ) ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರು, ಸಾವಿರದ ಎಂಟು ಮಹಾವೀರವಾಣಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಜೈನ ಧರ್ಮದ ತಿರುಳು, ರೂವಾರಿ ಅಭೀಷ್ಟ, ತ್ಯಾಗ ಶ್ರೀ, ಶತ ಸಂಭ್ರಮ (ಸಂಪಾದಕತ್ವ)ಇದಲ್ಲದೆ ಹಲವಾರು ಮಕ್ಕಳಿಗಾಗಿ ಕಿರು ನಾಟಕ ದೃಶ್ಯ ರೂಪಕಗಳನ್ನು ಬರೆದು ಧ್ವನಿ ಸುರುಳಿ ಹೊರತಂದಿದ್ದಾರೆ ಅವುಗಳೆಂದರೆ ಸುವರ್ಣ ಭಾರತಿ,ಕೆಂಪಜ್ಜಿಯ ಸುಖೀ ಸಂಸಾರ, ನವರಸೋಲಾಸ, ನಿಸರ್ಗ ಇತ್ಯಾದಿ.ಭವ್ಯಾಂಜಲಿ (ಧ್ವನಿ ಸುರಳಿ) ವೀರ ಧರ್ಮ ದೀಪಿಕೆಯರು (ದೃಶ್ಯಾರೋಪಕ ) ಹಂಪ – ಕಂತಿಯರ ಸಂವಾದ
ಇವರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಸದಸ್ಯರು. ಕರ್ನಾಟಕ ಲೇಖಕಿಯ ಸಂಘ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರು, ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಬೆಂಗಳೂರು ಗೌರವ ಸಲಹೆಗಾರ್ತಿ, ಆರ್‌ಟಿ ನಗರ ಜೈನ ಮಿಲನ್ ಬೆಂಗಳೂರು ಇದರ ಅಧ್ಯಕ್ಷರು,ಕರ್ನಾಟಕ ಜೈನ ಅಸೋಸಿಯೇಷನ್ ಬೆಂಗಳೂರು ಹಾಲಿ ಕಾರ್ಯಕಾರಿ ಸದಸ್ಯರು, ನ್ಯೂ ಕೇಂಬ್ರೆಜ್ ವಿದ್ಯಾ ಸಂಸ್ಥೆಯ ಸಾಂಸ್ಕೃತಿಕ ಸಮಿತಿ ಬೆಂಗಳೂರು ಇದರ ಸದಸ್ಯರು, ಲಯನ್ಸ್ ಕ್ಲಬ್ ಆಫ್ ಜಾಣ ಯೋಗ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರು, ಚಕ್ರೇಶ್ವರಿ ಮಹಿಳಾ ಸಮಾಜ ಬೆಂಗಳೂರು, ತುಳು ಒಕ್ಕೂಟ ಬೆಂಗಳೂರು, ಕರ್ನಾಟಕ ಕರಾವಳಿ ವೇದಿಕೆ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರು,ಮಹಾವೀರ ಪೌಂಡೇಶನ್ ಇದರ ಕಾರ್ಯಕಾರಿ ಸದಸ್ಯರು
ಇವರಿಗೆ ಬಂದ ಪ್ರಶಸ್ತಿಗಳು 1998ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕವನ ಸಂಕಲನಕ್ಕೆ ಪಿ ಶಾಂತಿಲಾಲ್ ಪ್ರಶಸ್ತಿ ಬಂದಿದೆ ( ಮೂರು ಬಾರಿ).
1998ರಲ್ಲಿ ಪ್ರಶಾಂತನಗರದ ಲಯನ್ಸ್ ಕ್ಲಬ್ ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ
1998ರಲ್ಲಿ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರು ಕೀರ್ತಿ ಸ್ವಾಮೀಜಿ ಅವರಿಂದ ರಾಜ್ಯಮಟ್ಟದ ಜೈನ ಕವಿಗೋಷ್ಠಿಯಲ್ಲಿ ಸ್ವಸ್ತಿ ಪ್ರಶಸ್ತಿ
1999ರಲ್ಲಿ ಕವನ ಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ 2001ರಲ್ಲಿ ಸ್ವಾತಂತ್ರ್ಯ ಯೋಧ ಎಂ ಡಿ ಅಧಿಕಾರಿ ಕೃತಿಗೆ ಗೋರೂರು ಸಾಹಿತ್ಯ ಪ್ರಶಸ್ತಿ
2004ರಲ್ಲಿ ಕರ್ನಾಟಕ ಪ್ರತಿಭ ಅಕಾಡೆಮಿಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನ್ಯೂ ಕೇಂಬ್ರಿಜ್ ವಿದ್ಯಾ ವಿದ್ಯಾ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ
2012ರಲ್ಲಿ ಜೈಹಿಂದ್ ಅಕಾಡೆಮಿ ಎಜುಕೇಶನ್ ಟ್ರಸ್ಟ್ ನಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ
2017ರಲ್ಲಿ ನವಚೈತನ್ಯ ಉದಯ ಪ್ರತಿಷ್ಠಾನದಿಂದ ಕರುನಾಡ ಸಾಧನ ಶ್ರೀ ಸಿರಿ ರತ್ನ ಪ್ರಶಸ್ತಿಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ. ಹಾಸನದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಹನಿಗವನ ಗೋಷ್ಠಿಯ ನಿರೂಪಕಿಯಾಗಿ ಸೇವೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಕೃತಿ ಬಿಡುಗಡೆ.
2007 ರಲ್ಲಿ ಧರ್ಮಸ್ಥಳದಲ್ಲಿ ಬೆಳದಿಂಗಳ ಕವಿಗೋಷ್ಠಿಯಲ್ಲಿ ವಾಚಕಗಳಾಗಿ ಅನುಭವ
2009ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚ ಭಟ್ ಯೋಗ ಏರ್ಪಡಿಸಿದ ಸರ್ವಧರ್ಮ ಸಮ್ಮೇಳನದಲ್ಲಿ ಶ್ರೀ ಗೋವಿಂದ ತೀರ್ಥ ಸ್ವಾಮೀಜಿ ಅವರಿಂದ ಜಯನ ಧರ್ಮದ ಪ್ರತಿನಿಧಿಯಾಗಿ ಉಪನ್ಯಾಸ ನೀಡಿರುವ ಅನುಭವ2011ರಲ್ಲಿ ಬ್ರಹ್ಮಕುಮಾರಿ ಸಮಾಜದಲ್ಲಿ ಉಪನ್ಯಾಸಕಿಯಾಗಿ ಪೂಜ್ಯ ಮಾತಾರಿಂದ ಸನ್ಮಾನ ಬೆಂಗಳೂರಿನಲ್ಲಿ ಜ್ಞಾನ ಸಾಗರ ಮಹಾರಾಜರ ಸಮ್ಮುಖದಲ್ಲಿ ಪ್ರಪ್ರಥಮ ಶಿಕ್ಷಕರ ಸಮ್ಮೇಳನದಲ್ಲಿ ಜೈನ ಮಹಿಳಾ ಶಿಕ್ಷಕ ಪರಂಪರೆ ಬಗ್ಗೆ ಉಪನ್ಯಾಸ.
2013ರಲ್ಲಿಸ್ವಾಮಿ ವಿವೇಕಾನಂದ ಜನ್ಮದಿನದ ಪ್ರಯುಕ್ತ ಮೂರು ಬಾರಿ ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸ ಇರುವ ನೀಡಿರುವ ಅನುಭವ
2014ರಂದು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪ್ರೇಮ ಭಟ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಅನುಭವ
ಕಾರ್ಕಳ ಶ್ರೀ ಬಾಹುಬಲಿ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವಿಕೆ,2015 ರಂದು ವರಂಗದಲ್ಲಿ ದಲಿತ ಸಂಘರ್ಷ ವಾರ್ಷಿಕೋತ್ಸವದಲ್ಲಿ ಉಪನ್ಯಾಸಕಿಯಾಗಿ ಅನುಭವ,
ಪ್ರಗತಿ ಮಹಿಳಾ ಮಂಡಲ ಭಾವನಗರಿಯವರಿಂದ ರಾಜ್ಯೋತ್ಸವ ಸನ್ಮಾನ.ರಾಜ್ಯ ಮತ್ತು ರಾಷ್ಟ್ರಮಟ್ಟದ ದಿನಪತ್ರಿಕೆಗಳಲ್ಲಿ ಜಯಲಕ್ಷ್ಮಿ ಅಭಯ ಕುಮಾರ್ ಅವರ ಸಾಹಿತ್ಯ ಸಮಾಜಕ್ಕೆ ಸಾಂಸ್ಕೃತಿಕ ಸೇವೆ ಬಗ್ಗೆ ಲೇಖನಗಳು ಬಂದಿದೆ.
ಹೆಸರಾಂತ ಪತ್ರಕರ್ತರು ವೈಯಕ್ತಿಕವಾಗಿ ಸಂದರ್ಶನ ಮಾಡಿ ಲೇಖನಗಳನ್ನು ಪ್ರಕಟಿಸಿರುತ್ತಾರೆ.ಮುನಿಯಾಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಅಧ್ಯಕ್ಷರಾಗಿ ಅನುಭವ ಹಂಚಿಕೆ
ಇವರ ಈಗ ಪ್ರಸ್ತುತ ವಿಳಾಸ: ವಿಜಯಲಕ್ಷ್ಮಿ ಅಭಯ ಕುಮಾರ್ ಲೇಖಕಿ ಉಪನ್ಯಾಸಕಿ ಶಾಂತಿ ಧಾಮ ನಂಬರ್ 8215 ಮುಖ್ಯ ರಸ್ತೆ ವಿಜಯನಗರ
ಇವರ ಬೆಳವಣಿಗೆಯಲ್ಲಿ ಇವರ ಪತಿ ಅಭಯ್ ಕುಮಾರ್ ಜೊತೆಗಿದ್ದವರು. ಅಭಯಕುಮಾರ್ ಜಯಲಕ್ಷ್ಮಿ ದಂಪತಿಗಳಿಗೆ ನಿಖಿಲ್ ಬಿಎ ಹಾಗೂ ನಿಶ್ಚಲ್ ಬಿ ಎ ಎಂಬ ಸುಪುತ್ರರು ಇಬ್ಬರು ವಿವಾಹಿತರು.