ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದ ‘ಅತ್ಯುತ್ತಮ ವಿಮಾನ ನಿಲ್ದಾಣ (ಆಗಮನ)’ ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ಗ್ರಾಹಕ ಸೇವೆಯಲ್ಲಿ ಉತ್ಕೃಷ್ಟತೆ ಮತ್ತು ಒಟ್ಟಾರೆ ಪ್ರಯಾಣಿಕರ ತೃಪ್ತಿಗಾಗಿ ಕಾರ್ಯ ನಿರ್ವಹಿಸುವ ವಿಮಾನ ನಿಲ್ದಾಣಗಳನ್ನು ಗುರುತಿಸಿ ಏರ್ಪೋಟ್್ರ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ಈ ಪ್ರಶಸ್ತಿ ನೀಡುತ್ತದೆ.

‘ಈ ಪ್ರಶಸ್ತಿಯು ನಮ್ಮ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರಯಾಣಿಕರ ನಿರೀಕ್ಷೆಗಳನ್ನು ಪೂರೈಸಲು ನಾವು ನಮ್ಮ ಸೇವೆಗಳನ್ನು ನಿತ್ಯವೂ ಸುಧಾರಿಸುತ್ತಲೇ ಇರುತ್ತೇವೆ. ಅದನ್ನು ಇನ್ನು ಮುಂದೆಯೂ ಮುಂದುವರಿಸುತ್ತೇವೆ’ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಚೀನಾದ ಗುವಾಂಗ್ಟನಲ್ಲಿ 2025ರ ಸೆಪ್ಟೆಂಬ‌ರ್ 8ರಿಂದ 11ರವರೆಗೆ ನಡೆಯಲಿರುವ ಎಸಿಐ ವಿಶ್ವ ವಿಮಾನ ನಿಲ್ದಾಣ ಅನುಭವ ಶೃಂಗಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.