ಬೆಳಗಾವಿ: ಬಾಗಲಕೋಟೆ ಪಟ್ಟಣದ ಎಮ್.ಆರ್.ಎನ್ (ನಿರಾಣಿ) ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಶರೀರ ಚಿಂತನ 2024 ಸಮ್ಮೇಳನದಲ್ಲಿ ಬೆಳಗಾವಿ ಕೆಎಲ್‌ಇ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ, ದೇಹಧಾನ ಜಾಗೃತಿ ಗಾಗಿ ತಂದೆಯ ಮೃತ ದೇಹ ಛೇದಿಸಿ ವೈದ್ಯಕೀಯ ಕ್ಷೇತ್ರದ ದೇಹದಾನದ ರಾಯಭಾರಿ ಡಾ.ಮಹಾಂತೇಶ ರಾಮಣ್ಣವರ ಅವರ ಆಯುರ್ವೆದ ವೈದ್ಯಕೀಯ ಬೋಧನಾ ಸೇವೆ ಹಾಗೂ ಸಾರ್ವಜನಿಕರಲ್ಲಿ ದೇಹದಾನ ಹಾಗೂ ಅಂಗಾಂಗ ದಾನದ ಜಾಗೃತಿ ಅರಿವು ಮೂಡಿಸುವ ನಿಸ್ವಾರ್ಥ ಸೇವೆಯನ್ನು
ಪರಿಗಣಿಸಿ ಶರೀರ ರತ್ನ 2024 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ,ನಿರ್ದೇಶಕರು ಎಮ್.ಆರ್.ಎನ್ (ನಿರಾಣಿ) ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಸಂಗಮೇಶ ನಿರಾಣಿ,ತೇಜಸ್ ಇಂಟರ್ನ್ಯಾಷನಲ್ ಎಜುಕೇಶನಲ್ ಸಂಸ್ಥೆಯ ಅಧ್ಯಕ್ಷ ಮಾಧುರಿ ಮುಧೋಳ,ಡಾ.ಗಣೇಶ್ ಪುತ್ತೂರು,ಎಂಆರ್ ಎನ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಗಂಗಾವತಿ,ಡಾ. ಶಿವಕುಮಾರ ಗಂಗಾಲ್,ಡಾ.ಮುರಳೀಧರ್ ಬಡಿಗೇರ ಉಪಸ್ಥಿತರಿದ್ದರು.
ಡಾ.ರಾಮಣ್ಣವರ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಕೆಎಲ್ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಸುಹಾಸಕುಮಾರ ಶೆಟ್ಟಿ, ಶಿಕ್ಷಕರು,ವೈದ್ಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.