ಬೆಂಗಳೂರು: ಅಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಜರಗುವ ‘ಆರತಿ‘ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರತಿ ದಿನ ಬೆಳಗ್ಗೆ 6.30ಕ್ಕೆ ನೇರ ಪ್ರಸಾರವಾಗಲಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ವಾಹಿನಿ ದೂರದರ್ಶನ (ಡಿಡಿ) , ಬಾಲರಾಮನಿಗೆ ಜರಗುವ ವಿಶೇಷ ಪೂಜೆ, ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮ ನೇರ ಪ್ರಸಾರ ಮಾಡುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದೆ.