ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಅಯೋಧೈಯ ಭವ್ಯ ರಾಮಮಂದಿರದಲ್ಲಿ ಅನಾವರಣಗೊಂಡ ಬಾಲರಾಮನ ಫೋಟೋ ಒಳಗೊಂಡ ವಿಶ್ವದ ಮೊತ್ತಮೊದಲ ಅಂಚೆ ಚೀಟಿಯನ್ನು ಲಾವೋಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಲಾವೋಸ್‌ಗೆ ಭೇಟಿ ನೀಡಿದ ವೇಳೆ, ಈ ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.