ಅಯೋಧ್ಯೆ :

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾನ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ಜನವರಿ 22ರಂದು ಮಧ್ಯಾಹ್ನ 12 20ಕ್ಕೆ ಅಭಿಜಿನ್ ಲಗ್ನ ಸುಮೂರ್ತದಲ್ಲಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಟಾಯು ಪ್ರತಿಮೆಯನ್ನು ಅವರು ಅನಾವರಣಗೊಳಿಸುವರು. ರಾಮನ ಪ್ರತಿಷ್ಠಾಪನೆಯ ಮರುದಿನದಿಂದ ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರಿಗೆ ದೇವರ ದರ್ಶನ ಲಭಿಸಲಿದೆ. ಪ್ರತಿಷ್ಠಾಪನೆ ದಿನದಂದು ದೇಶದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಭಕ್ತರಿಗೆ ಟೆಂಟ್ ಸಿಟಿ ನಿರ್ಮಾಣವಾಗುತ್ತಿದ್ದು ಪ್ರತಿಷ್ಠಾಪನೆ ವೇಳೆ ಇಲ್ಲಿ ತಂಗಲು ವಸತಿ ಸೌಕರ್ಯ ಏರ್ಪಡಿಸಲಾಗುತ್ತಿದೆ.